ಕೊಡಿಂಬಾಳ: ಧರ್ಮಸ್ಥಳ ಯೋಜನೆ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

kadaba times

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಿಂಬಾಳ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಕೊಡಿಂಬಾಳದ ಶ್ರೀ ರಾಮ ಭಜನಾ ಮಂದಿರದಲ್ಲಿ ನೆರವೇರಿತು. ಒಕ್ಕೂಟದ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಶಕುಂತಲಾ ಹಾಗೂ ಉಪಾಧ್ಯಕ್ಷರಾಗಿ ಶ್ರೀ ವೆಂಕಟ್ರಮಣ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಇ-ಸೇವೆಗಳು ಹಾಗೂ ಡಿಜಿಪೇ ಕುರಿತು ಜಾಗೃತಿ ಮೂಡಿಸಲಾಯಿತು.

kadaba times
uniq

ಕಡಬ / ಕೊಡಿಂಬಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕಡಬ ತಾಲೂಕಿನ ಕೊಡಿಂಬಾಳ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಕೊಡಿಂಬಾಳ ಶ್ರೀ ರಾಮ ಭಜನಾ ಮಂದಿರದ ಆವರಣದಲ್ಲಿ  ನಡೆಯಿತು.

ಕೊಡಿಂಬಾಳ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಿಂಬಾಳ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ.

ಅಧ್ಯಕ್ಷರಾಗಿ  ಶ್ರೀಮತಿ ಶಕುಂತಲಾ, ಉಪಾಧ್ಯಕ್ಷರಾಗಿ ಶ್ರೀ ವೆಂಕಟ್ರಮಣ, ಕಾರ್ಯದರ್ಶಿಯಾಗಿ ಶ್ರೀಮತಿ ಆಶಿಕಾ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಸವಿತಾ ಕೋಶಾಧಿಕಾರಿಯಾಗಿ  ಶ್ರೀಮತಿ ಲಕ್ಷ್ಮೀ ಅವರನ್ನು ಒಕ್ಕೂಟದ ಮುಂದಿನ ಅವಧಿಯ ನೂತನ ಪದಾಧಿಕಾರಿಗಳನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

kadaba times
kadaba times

CSC ಇ-ಸೇವೆಗಳು ಹಾಗೂ ಡಿಜಿಪೇ ಜಾಗೃತಿ: ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ತಾಲೂಕು ನೋಡಲ್ ಅಧಿಕಾರಿ ರಕ್ಷಕ್ ಅವರು, ಸಾಮಾನ್ಯ ಸೇವಾ ಕೇಂದ್ರಗಳ (CSC) ಮೂಲಕ ಸಾರ್ವಜನಿಕರಿಗೆ ದೊರೆಯುವ ಪಿಂಚಣಿ ನೋಂದಾವಣೆ, ಪಾನ್ ಕಾರ್ಡ್ ಅರ್ಜಿ, ಪಾಸ್‌ಪೋರ್ಟ್ ನೋಂದಾವಣೆ ಹಾಗೂ ಡಿಜಿಟಲ್ ಹಣಕಾಸು ವ್ಯವಹಾರದ ‘ಡಿಜಿಪೇ’ (DigiPay) ಸೇವೆಗಳ ಕುರಿತು ಸದಸ್ಯರಿಗೆ ವಿಸ್ತಾರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ವ್ಯಾಪ್ತಿಯ ಸೇವಾಪ್ರತಿನಿಧಿ ದಿನೇಶ್ ಕುಮಾರ್, ಒಕ್ಕೂಟದ ಮಾಜಿ ಹಾಗೂ ನೂತನ ಪದಾಧಿಕಾರಿಗಳು ಮತ್ತು ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Related Articles

Latest Articles