ದಕ್ಷಿಣ ಕನ್ನಡ: ಒಲಿಂಪಿಯಾ ಬಾಡಿ ಬಿಲ್ಡರ್ ಸ್ಪರ್ಧೆಗೆ ಫಿಟ್‍ನೆಸ್ ಜಿಮ್ ಮಾಲಕ ಆಯ್ಕೆ

kadaba times

ವಿಟ್ಲ: ವಿಟ್ಲದ ಫಿಟ್‍ನೆಸ್ ಜಿಮ್ ನ ಮಾಲಕ ಸುನೀಲ್ ಪಾಯಸ್ ಅವರು ಸಿಂಗಾಪುರದಲ್ಲಿ ನಡೆದ ದೇಹದಾರ್ಡ್ಯ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದು ಅಮೇರಿಕಾದಲ್ಲಿ ನಡೆಯಲಿರುವ ಒಲಿಂಪಿಯಾ ಬಾಡಿ ಬಿಲ್ಡರ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

kadaba times
uniq

ಸಿಂಗಾಪುರದಲ್ಲಿ ನಡೆದ ಐ.ಎನ್.ಬಿ.ಎ ನ್ಯಾಚುರಲ್ ಏಷ್ಯಾನ್ ಗೇಮ್ ಓಪನ್ ಬಾಡಿ ಬಿಲ್ಡಂಗ್‍ನಲ್ಲಿ ವಿವಿಧ ವಿಭಾಗ ದಲ್ಲಿ 4 ಚಿನ್ನದ ಪದಕ ಪಡೆದಿದ್ದಾರೆ. ನವೆಂಬರ್ ನಲ್ಲಿ ಅಮೇರಿಕಾದಲ್ಲಿ ನಡೆಯುವ ನ್ಯಾಚುರಲ್ ಓಲಂಪಿಯಾಕ್ಕೆ ಇವರು ಆಯ್ಕೆಯಾಗಿದ್ದಾರೆ.

kadaba times
kadaba times

ಇವರು ಕಳೆದ ಹಲವಾರು ವರ್ಷಗಳಿಂದ ವಿಟ್ಲದ ಅರಮನೆ ರಸ್ತೆಯಲ್ಲಿ ಫಿಟ್ ನೆಸ್ ಜಿಮ್ ನಡೆಸಿಕೊಂಡು ಬರುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಸುನೀಲ್ ಅವರು ಈ ಹಿಂದೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದರು

Related Articles

Latest Articles