ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಕೋಡಿಂಬಾಳದ ಯುವಕ ಮನೆಯಲ್ಲೇ ನೇಣಿಗೆ ಶರಣು

kadaba times

ಕೋಡಿಂಬಾಳ ಗ್ರಾಮದ ನಿವಾಸಿ, ಸೆಂಟ್ರಿಂಗ್ ಕಾರ್ಮಿಕ ಅಶೋಕ್ (33) ಎಂಬವರು ಜುಲೈ 27ರಂದು ತಮ್ಮ ಮನೆಯಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ತಾಯಿ ಬೇಬಿ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿದೆ.

kadaba times
uniq

ಕಡಬ:ಕೋಡಿಂಬಾಳ ಗ್ರಾಮದಲ್ಲಿ ಯುವಕನೊಬ್ಬ ಮನೆಯಲ್ಲೇ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ಜುಲೈ 27ರಂದು ಸಂಭವಿಸಿದೆ.

​ಕೋಡಿಂಬಾಳ ಗ್ರಾಮದ ನಿವಾಸಿ, ಸೆಂಟ್ರಿಂಗ್ ಕಾರ್ಮಿಕ ಅಶೋಕ (33) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.

​ಮೃತ ಅಶೋಕ್ ಅವರು ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇತ್ತೀಚೆಗೆ ವಿಪರೀತ ಮದ್ಯ ಸೇವಿಸುವ ಅಭ್ಯಾಸ ಹೊಂದಿದ್ದರೆನ್ನಲಾಗಿದೆ. ಜುಲೈ 27ರಂದು ಬೆಳಿಗ್ಗೆ ಕಡಬ ಪೇಟೆಗೆ ಹೋಗಿ ಮಧ್ಯಾಹ್ನದ ವೇಳೆಗೆ ಮನೆಗೆ ಹಿಂತಿರುಗಿದ್ದ ಅಶೋಕ್, ತಾನು ಸಾಯುವುದಾಗಿ ಹೇಳಿ ನೈಲಾನ್ ಹಗ್ಗದೊಂದಿಗೆ ಕೊಠಡಿಗೆ ತೆರಳಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದರು.

​ಕುಟುಂಬಸ್ಥರು ಬಾಗಿಲು ತೆಗೆಯುವಂತೆ ಎಷ್ಟೇ ಮನವಿ ಮಾಡಿದರೂ ಬಾಗಿಲು ತೆಗೆಯಲಿಲ್ಲ. ಅನುಮಾನಗೊಂಡ ತಾಯಿ ಬೇಬಿ ಹಾಗೂ ಸೊಸೆ  ಅವರು ಬಾಗಿಲನ್ನು ಬಲವಾಗಿ ತಳ್ಳಿ ಒಳಗೆ ಹೋಗಿ ನೋಡಿದಾಗ, ಕೊಠಡಿಯ ಕಬ್ಬಿಣದ ಅಡ್ಡಕ್ಕೆ ನೈಲಾನ್ ಹಗ್ಗದಿಂದ ಅಶೋಕ್ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.

​ತಕ್ಷಣವೇ ಇಬ್ಬರೂ ಸೇರಿ ಹಗ್ಗವನ್ನು ಕತ್ತರಿಸಿ ಕೆಳಗಿಳಿಸಿ ಪರಿಶೀಲಿಸಿದಾಗ  ಆಗಲೇ ಮೃತಪಟ್ಟಿರುವುದು ದೃಢಪಟ್ಟಿದೆ.

kadaba times
kadaba times

​ಘಟನೆಗೆ ಸಂಬಂಧಿಸಿದಂತೆ ಮೃತರ ತಾಯಿ ಬೇಬಿ (60) ಅವರು ನೀಡಿದ ದೂರಿನ ಆಧಾರದ ಮೇಲೆ, ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ 32/2026, ಕಲಂ: 194 BNSS-2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

​⚠️ ಮಾನಸಿಕ ಸಂಕಟವೇ? ಸಹಾಯ ಲಭ್ಯವಿದೆ:

ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಮಾನಸಿಕ ಒತ್ತಡ ಅಥವಾ ಸಂಕಟ ಎದುರಾದಾಗ ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಿರಿ: 104 (ಕರ್ನಾಟಕ ಸರ್ಕಾರಿ ಸಹಾಯವಾಣಿ).

 

KADABA TIMES NEWS
KADABA TIMES NEWShttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಮಾಧ್ಯಮವಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ದ.ಕ ಜಿಲ್ಲೆಯ ಪ್ರಮುಖ ಸುದ್ದಿಗಳು, ರಾಜ್ಯ,ದೇಶದ ಮಹತ್ವದ ಘಟನಾವಳಿಗಳನ್ನು ಸ್ಥಳೀಯರಿಗೆ ತಲುಪಿಸುತ್ತದೆ. ನಮ್ಮನ್ನು ಬೆಂಬಲಿಸಿ ಮತ್ತು ಪ್ರೋತ್ಸಾಹಿಸಿ. ನಿಮ್ಮೂರಿನ ಸುದ್ದಿ ಮಾಹಿತಿಗಳನ್ನು +91 93804 74819 ಗೆ ವಾಟ್ಸಪ್ ಮಾಡಿ.

Related Articles

Latest Articles