ಕುಕ್ಕೆ ಸುಬ್ರಹ್ಮಣ್ಯ: ಚಿಕಿತ್ಸೆ ಪಡೆದಿದ್ದರೂ ಹೆಚ್ಚಾದ ಜ್ವರ, ಹೊಟ್ಟೆನೋವು- ಕೂಲಿ ಕಾರ್ಮಿಕ ಮೃತ್ಯು

kadaba times

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕನಕವಾಡ ಮೂಲದ ಹನುಮಂತಪ್ಪ (55) ಎಂಬವರು ಕಡಬ ತಾಲೂಕಿನ ಯೆನೆಕಲ್ಲು ಗ್ರಾಮದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾಗ ತೀವ್ರ ಅನಾರೋಗ್ಯ ಹಾಗೂ ಉಸಿರಾಟದ ತೊಂದರೆಯಿಂದ ಆಗಸ್ಟ್ 2ರಂದು ಮೃತಪಟ್ಟಿದ್ದಾರೆ. ಈ ಕುರಿತು ಮೃತರ ಪತ್ನಿ ತಿಪ್ಪವ್ವ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿದೆ

kadaba times
uniq

ಸುಬ್ರಹ್ಮಣ್ಯ: ಗದಗ ಜಿಲ್ಲೆಯಿಂದ ಉದ್ಯೋಗ ಅರಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯಕ್ಕೆ ಬಂದಿದ್ದ ಕೂಲಿ ಕಾರ್ಮಿಕರೊಬ್ಬರು ತೀವ್ರ ಅನಾರೋಗ್ಯ ಹಾಗೂ ಉಸಿರಾಟದ ತೊಂದರೆಯಿಂದ ಮೃತಪಟ್ಟ ಘಟನೆ ಕಡಬ ತಾಲೂಕಿನ ಯೆನೆಕಲ್ಲು ಗ್ರಾಮದಲ್ಲಿ ಸಂಭವಿಸಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಕನಕವಾಡ ಗ್ರಾಮದ ನಿವಾಸಿ ಹನುಮಂತಪ್ಪ ಎಂಬವರೇ ಅನಾರೋಗ್ಯದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಚಿಕಿತ್ಸೆ ಪಡೆದಿದ್ದರೂ ಹೆಚ್ಚಾದ ಜ್ವರ, ಹೊಟ್ಟೆನೋವು: ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದ ಕಾರಣಕ್ಕಾಗಿ ಹನುಮಂತಪ್ಪ ಹಾಗೂ ಅವರ ಪತ್ನಿ ತಿಪ್ಪವ್ವ (54) ಅವರು ಸುಮಾರು 1 ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಸುಬ್ರಹ್ಮಣ್ಯ ಗ್ರಾಮದ ಭವಾನಿ ಶಂಕರ ಎಂಬವರನ್ನು ಭೇಟಿಯಾಗಿದ್ದ ಈ ದಂಪತಿ, ಅವರಿಗೆ ಸೇರಿದ ಯೆನೆಕಲ್ಲು ಗ್ರಾಮದ ಮೇಲ್ಕಟ್ಟ ಎಂಬಲ್ಲಿರುವ ತೋಟದ ಮನೆಗೆ ಕೊಠಡಿ ಪಡೆದುಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

kadaba times
kadaba times

ಆಗಸ್ಟ್ 1 ರಂದು ಹನುಮಂತಪ್ಪ ಅವರಿಗೆ ದಿಢೀರ್ ಜ್ವರ ಕಾಣಿಸಿಕೊಂಡಿದ್ದರಿಂದ ಸುಬ್ರಹ್ಮಣ್ಯದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಕೊಠಡಿಗೆ ಮರಳಿದ್ದರು. ಆದರೆ ರಾತ್ರಿ ವೇಳೆಗೆ ಜ್ವರ ತೀವ್ರಗೊಂಡಿದ್ದಲ್ಲದೆ,  ಹೊಟ್ಟೆನೋವು, ಬೆನ್ನುನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.

ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರು: ಆಗಸ್ಟ್ 2ರಂದು ಬೆಳಗ್ಗೆ 5.00 ಗಂಟೆಯಿಂದ ಹನುಮಂತಪ್ಪ ಅವರಿಗೆ ಉಸಿರಾಟದ ತೊಂದರೆ ತೀವ್ರವಾಗಿತ್ತು. ಬೆಳಿಗ್ಗೆ 9:00 ಗಂಟೆಗೆ ಆಸ್ಪತ್ರೆಗೆ ಕರೆದೊಯ್ಯಲು ಪತ್ನಿ ಸಿದ್ಧತೆ ನಡೆಸುತ್ತಿದ್ದಾಗ, ಬೆಳಿಗ್ಗೆ  ಉಸಿರಾಟ ನಿಂತು ಕೊಠಡಿಯಲ್ಲೇ ಹನುಮಂತಪ್ಪ ಮೃತಪಟ್ಟಿದ್ದಾರೆ.

ಮೃತ ಹನುಮಂತಪ್ಪ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಿಂದಲೇ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ತಿಪ್ಪವ್ವ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ 16/2026, ಕಲಂ: 194 BNSS ರಂತೆ ಶವಪರೀಕ್ಷೆ ಹಾಗೂ ತನಿಖೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related Articles

Latest Articles