ಬಿಳಿನೆಲೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

kadaba times

ಕಡಬ / ಪುತ್ತೂರು:ಕೆಲ ದಿನಗಳ ಹಿಂದೆ ಬಿಳಿನೆಲೆಯಲ್ಲಿ ನಡೆದ ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣದ ಆರೋಪಿಗಳಾದ ಬಿಳಿನೆಲೆ ಗ್ರಾಮದ ಸುನಿಲ್, ಮನೋಜ್ ಹಾಗೂ ಮನ್ವಿತ್ ಎಂಬುವವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

kadaba times
uniq

ಜುಲೈ 16ರಂದು ಸಂಜೆ ಸುಮಾರು 7.30 ಗಂಟೆಯ ವೇಳೆಗೆ ಬಿಳಿನೆಲೆಯ ಪೌಲ್ಟ್ರಿ ಫಾರ್ಮ್ ಒಂದರ ಹತ್ತಿರ ಅವಿನಾಶ್ ಎಂಬವರು ಸತೀಶ್ ಮತ್ತು ಸುಬ್ರಾಯ ಅವರೊಂದಿಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಸುನಿಲ್, ಮನೋಜ್ ಹಾಗೂ ಮನ್ವಿತ್ ಅವರು ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಅವಿನಾಶ್ ಅವರೊಂದಿಗೆ ಮಾತಿನ ಚಕಮಕ ನಡೆಸಿದ್ದರು.

ಮಾತು ವಿಕೋಪಕ್ಕೆ ತಿರುಗಿ ಮನೋಜ್ ಮತ್ತು ಮನ್ವಿತ್ ಅವರು ಮರದ ಕೋಲಿನಿಂದ ತನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಅವಿನಾಶ್ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

kadaba times
kadaba times

ದೂರಿನ ಆಧಾರದ ಮೇಲೆ ಕಡಬ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 115(2), 118(1), 352, 351(2) ಜೊತೆಗೆ 3(5) ರಂತೆ ಪ್ರಕರಣ ದಾಖಲಿಸಿಕೊಂಡಿದ್ದರು.

ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು:

ಪ್ರಕರಣದಲ್ಲಿ  ಆರೋಪಿಗಳಾದ ಸುನಿಲ್, ಮನೋಜ್ ಮತ್ತು ಮನ್ವಿತ್ ಅವರು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆರೋಪಿಗಳ ಪರವಾಗಿ ಪ್ರಸಿದ್ಧ ವಕೀಲರಾದ ಮಹೇಶ್ ಕಜೆ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಅರ್ಜಿಯ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ  ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

Related Articles

Latest Articles