ನೆಲ್ಯಾಡಿ: ಭಾರಿ ಗಾಳಿ ಮಳೆಗೆ ರಾಮನಗರದಲ್ಲಿ ಮನೆ ಮೇಲೆ ಬಿದ್ದ ಮರ

kadaba times

ನೆಲ್ಯಾಡಿ ಗ್ರಾಮದ ರಾಮನಗರದಲ್ಲಿ ಜುಲೈ 31ರಂದು ಮಧ್ಯಾಹ್ನ ಸುರಿದ ಭಾರಿ ಗಾಳಿ-ಮಳೆಗೆ ಮಂಚ ಮುಗೇರ ಎಂಬುವವರ ಮನೆ ಮೇಲೆ ಬೃಹತ್ ಮರವೊಂದು ಬಿದ್ದು ಹಾನಿಗೊಂಡಿದೆ. ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ

kadaba times
uniq

ನೆಲ್ಯಾಡಿ:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ನೆಲ್ಯಾಡಿ ಗ್ರಾಮದ ರಾಮನಗರದಲ್ಲಿ ಮನೆಗೆ ಹಾನಿಯಾದ ಘಟನೆ ಜುಲೈ 31ರಂದು ಮಧ್ಯಾಹ್ನ ಸಂಭವಿಸಿದೆ.

ರಾಮನಗರ ನಿವಾಸಿ ಮಂಚ ಮುಗೇರ ಎಂಬುವವರ ಮನೆಗೆ ಭಾರಿ ಗಾಳಿಯ ರಭಸಕ್ಕೆ ಮರವೊಂದು ಏಕಾಏಕಿ ಮುರಿದು ಬಿದ್ದಿದೆ. ಪರಿಣಾಮವಾಗಿ ಮನೆಯ ಮೇಲ್ಛಾವಣಿಯ ಸಿಮೆಂಟ್ ಶೀಟ್‌ಗಳು, ಹಂಚುಗಳು ಹಾಗೂ ಪಕ್ಕಾಸುಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, ನಷ್ಟ ಸಂಭವಿಸಿದೆ. ಅದೃಷ್ಟವಶಾತ್‌ ಮನೆಯಲ್ಲಿದ್ದವರು ಅನಾಹುತದಿಂದ ಪಾರಾಗಿದ್ದಾರೆ.

kadaba times
kadaba times

ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಭೇಟಿ, ಪರಿಶೀಲನೆ: ವಿಷಯ ತಿಳಿದ ತಕ್ಷಣವೇ ನೆಲ್ಯಾಡಿ ಗ್ರಾಮ ಆಡಳಿತಾಧಿಕಾರಿ (VA) ಲಾವಣ್ಯ ಹಾಗೂ ನೆಲ್ಯಾಡಿ ಗ್ರಾ.ಪಂ. ಮಾಜಿ ಸದಸ್ಯ ರವಿಪ್ರಸಾದ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದ್ದಾರೆ.

ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಸೂಕ್ತ ಪರಿಹಾರ ಧನವನ್ನು ಒದಗಿಸಲು ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ

Related Articles

Latest Articles