ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಮಾದಕ ವಸ್ತು ಜಾಲ :ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕ ದುಬೈಗೆ ಪರಾರಿ?

kadaba times

ಬಾಗಲಕೋಟೆಯಲ್ಲಿ ಇತ್ತೀಚೆಗೆ ಪತ್ತೆಯಾದ ₹5.5 ಕೋಟಿ ಮೌಲ್ಯದ ಎಂಡಿಎಂಎ (MDMA) ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರು ಸಿಸಿಬಿ ಪೊಲೀಸರ ತನಿಖೆಯಲ್ಲಿ 4ನೇ ಆರೋಪಿಯಾಗಿರುವ ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕ ಜಲೀಲ್ ಅಲಿಯಾಸ್ ಬಾಬಾ (42) ಬಂಧನದ ಭೀತಿಯಿಂದ ದುಬೈಗೆ ಪರಾರಿಯಾಗಿದ್ದಾನೆ. ಸಮಾಜ ಸೇವೆಯ ಮುಖವಾಡ ಹೊತ್ತು ಆಂಬ್ಯುಲೆನ್ಸ್‌ನಲ್ಲಿ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ಈತ, ಜುಲೈ 25 ರಂದು ಶನಿವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದಾನೆ.

kadaba times
uniq

ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಬಾಗಲಕೋಟೆಯ ₹5.5 ಕೋಟಿ ಮೌಲ್ಯದ ಎಂಡಿಎಂಎ (MDMA) ಮಾದಕವಸ್ತು ಜಾಲಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ (CCB) ಪೊಲೀಸರು ತನಿಖೆ ತೀವ್ರಗೊಳಿಸಿರುವ ನಡುವೆಯೇ, ಪ್ರಕರಣದ 4ನೇ ಆರೋಪಿಯಾಗಿರುವ ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕ ಜಲೀಲ್ ಅಲಿಯಾಸ್ ಬಾಬಾ (42) ಬಂಧನದ ಭೀತಿಯಿಂದ ದೇಶ ತೊರೆದು ದುಬೈಗೆ ಪರಾರಿಯಾಗಿದ್ದಾನೆ.

ಕಳೆದ 8 ದಿನಗಳಿಂದ ತನ್ನೆರಡು ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದ ಜಲೀಲ್, ತನ್ನ ಸ್ನೇಹಿತರ ಸಹಾಯದೊಂದಿಗೆ ಜುಲೈ 25 ರಂದು ಶನಿವಾರ ರಾತ್ರಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪರಾರಿಯಾಗಿದ್ದಾನೆ ಎಂದು ಮೂಲಗಳಿಂದ ದೃಢಪಟ್ಟಿದೆ.

ಸಮಾಜಸೇವೆಯ ಮುಖವಾಡ; ಆಂಬ್ಯುಲೆನ್ಸ್‌ನಲ್ಲಿ ಡ್ರಗ್ಸ್ ದಂಧೆ

ಬೆಳ್ತಂಗಡಿಯಲ್ಲಿ ಸಮಾಜಸೇವಕನಂತೆ ಗುರುತಿಸಿಕೊಂಡಿದ್ದ ಜಲೀಲ್ ಅಲಿಯಾಸ್ ಬಾಬಾ, ತುರ್ತು ಸೇವೆಯ ಆಂಬ್ಯುಲೆನ್ಸ್ ವಾಹನವನ್ನೇ ಮಾದಕವಸ್ತು ಸಾಗಾಟಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದ. ಮುಖ್ಯ ಆರೋಪಿಗಳಿಂದ ಎಂಡಿಎಂಎ ಪಡೆದುಕೊಳ್ಳುತ್ತಿದ್ದ ಈತ, ಆಂಬ್ಯುಲೆನ್ಸ್‌ನಲ್ಲಿ ಜಿಲ್ಲೆಯ ಯುವಕರು, ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ತಲುಪಿಸಿ ಡ್ರಗ್ಸ್ ಜಾಲ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂಬ ವಿಚಾರ  ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

kadaba times
kadaba times

ಪ್ರಕರಣದ ಹಿನ್ನೆಲೆ ಮತ್ತು ಸುದೀರ್ಘ ಕಾರ್ಯಾಚರಣೆ:

 ಮಂಗಳೂರಿನ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು (26) ಎಂಬಾತನಿಂದ ₹1.50 ಲಕ್ಷ ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಅಣ್ಣಪ್ಪ ಸ್ವಾಮಿಯ ವಿಚಾರಣೆ ವೇಳೆ ದೆಹಲಿಯಿಂದ ಬೆಂಗಳೂರಿಗೆ ಡ್ರಗ್ಸ್ ತರುತ್ತಿದ್ದ ಸುಳಿವು ಸಿಕ್ಕಿತ್ತು. ತನಿಖೆ ಮುಂದುವರಿಸಿದ ಪೊಲೀಸರು ಜುಲೈ 15 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಬಳಿಯ ರಾಷ್ಟ್ರೀಯ ಹೆದ್ದಾರಿಯ ‘ರಾಯಲ್ ಇನ್ ಲಾಡ್ಜ್’ ಮೇಲೆ ದಾಳಿ ನಡೆಸಿ, 5 ಕೆಜಿ 196 ಗ್ರಾಂ ಎಂಡಿಎಂಎ (ಮೌಲ್ಯ ₹5.5 ಕೋಟಿ), ಕಾರು, ಬ್ಯಾಗ್ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದರು.

ಈ ವೇಳೆ ಬೆಳ್ತಂಗಡಿ ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಲಾಯಿಲ ಹಳೆಪೇಟೆಯ ಮೊಹಮ್ಮದ್ ಮುಸ್ತಫಾ (28) ಮತ್ತು ಇಂದಬೆಟ್ಟುವಿನ ಅಲ್ಫಾಜ್ ಎಂಬವರನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಮುಖ ಆರೋಪಿ ಅಲ್ತಾಫ್ ವಿರುದ್ಧ ಈ ಹಿಂದೆ ಕೊಣಾಜೆ (2024) ಹಾಗೂ ಉರ್ವ (2026) ಠಾಣೆಗಳಲ್ಲಿ ಡ್ರಗ್ಸ್ ಪ್ರಕರಣಗಳು ದಾಖಲಾಗಿದ್ದವು.

ಕೋರ್ಟ್‌ಗೆ ಸಿಸಿಬಿ ವರದಿ ಸಲ್ಲಿಕೆ – ಆಶ್ರಯ ನೀಡಿದವರಿಗೂ ಶಿಕ್ಷೆಯ ಎಚ್ಚರಿಕೆ:

ಮಂಗಳೂರು ನಗರ ಅಪರಾಧ ವಿಭಾಗ (CCB) ಪೊಲೀಸರು ಜುಲೈ 16 ರಂದು ಪ್ರಿನ್ಸಿಪಾಲ್ ಸೆಷನ್ಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಬಂಧಿತರನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ವರದಿಯಲ್ಲಿ 4ನೇ ಆರೋಪಿಯಾಗಿ ಆಂಬ್ಯುಲೆನ್ಸ್ ಚಾಲಕ ಜಲೀಲ್ @ ಬಾಬಾ ಹೆಸರು ಉಲ್ಲೇಖಿಸಲಾಗಿದ್ದು, ಆತನ ಬಂಧನ ಬಾಕಿ ಇದೆ ಎಂದು ತಿಳಿಸಲಾಗಿತ್ತು.ಪ್ರಕರಣವು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ವಿದೇಶಕ್ಕೆ ಪರಾರಿಯಾಗಲು ಜಲೀಲ್‌ನಿಗೆ ಸಹಕರಿಸಿದ, ಆಶ್ರಯ ನೀಡಿದ ಹಾಗೂ ಹಣಕಾಸಿನ ನೆರವು ನೀಡಿದ ಪ್ರತಿಯೊಬ್ಬರಿಗೂ ಸಿಸಿಬಿ ಪೊಲೀಸರಿಂದ ಶೀಘ್ರವೇ ಕಾನೂನು ಕಂಟಕ ಎದುರಾಗಲಿದೆ ಎಂದು ಪೊಲೀಸ್ ಮೂಲಗಳು ಎಚ್ಚರಿಸಿವೆ.

Related Articles

Latest Articles