ಕಡಬ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ವೃದ್ದ ಮಹಿಳೆ : ನೊ ಎಡ್ಮಿಷನ್ ಎಂದ ಸಿಬ್ಬಂದಿ!

kadaba times

nಕಡಬ ಟೈಮ್ಸ್, ಪ್ರಮುಖ ಸುದ್ದಿ: ಹಲ್ಲೆಗೊಳಗಾಗಿ  ಅಸ್ವಸ್ಥಗೊಂಡು ಕಡಬ ಸಮುದಾಯ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆಂದು ಬಂದ ಹಿರಿಯ ಮಹಿಳೆಯನ್ನು  ದಾಖಲಿಸಿಕೊಳ್ಳದೆ ಅಮಾನವೀಯ ರೀತಿಯಲ್ಲಿ ನಡೆದುಕೊಂಡ ಆರೋಪ ಕೇಳಿ ಬಂದಿದೆ.

kadaba times
uniq

ಕೊಂಬಾರು ಗ್ರಾಮದ ಸುಮಾರು 76 ಪ್ರಾಯದ ಹಿರಿಯ ಮಹಿಳೆ ಜಯಮಣಿ ಎಂಬವರು ಹಲ್ಲೆಗೊಳಗಾಗಿ  ಅಸ್ವಸ್ಥತಗೊಂಡು ಮನೆ ಬಳಿ ಬಿದ್ದಿದ್ದರು ಎನ್ನಲಾಗಿದೆ.  ಕೂಡಲೇ ಸ್ಥಳೀಯರು ಗಮನಿಸಿ ಚಿಕಿತ್ಸೆಗಾಗಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲು ಸೆ.19 ರ ಸಂಜೆ ಕರೆದುಕೊಂಡು ಬಂದಿದ್ದರು.

ಮಾಹಿತಿ ತಿಳಿದ ವೃದ್ದ ಮಹಿಳೆಯ ಮಗಳು ಕೂಡ ಅದೇ ಸಮಯಕ್ಕೆ ಆಸ್ಪತ್ರೆಗೆ ಆಗಮಿಸಿದ್ದರು. ಬಳಿಕ ಚಿಕಿತ್ಸೆ ಗಾಗಿ ದಾಖಲಿಸುವಂತೆ ತಿಳಿಸಿದರೂ ಡಾಕ್ಟರ್ 8 ಗಂಟೆಯ ಮೇಲೆ ಬರುವುದು ಅಲ್ಲಿಯವರೆಗೆ ಕಾಯಿರಿ ಎಂದು ಆಸ್ಪತ್ರೆಯಲ್ಲಿದ್ದ ಸಿಬ್ಬಂದಿಗಳು ಹೇಳಿರುವುದಾಗಿ ಆರೋಪಿಸಲಾಗಿದೆ.

kadaba times
kadaba times

ಆಸ್ಪತ್ರೆಯ ಬೆಡ್ ನಲ್ಲಿಯೂ ಮಲಗಲು ಅವಕಾಶ ಕೊಡದ ಕಾರಣ ಅಸ್ವಸ್ಥಗೊಂಡ ಹಿರಿಯ ಮಹಿಳೆಯನ್ನು ರೋಗಿಗಳು ಬಂದು ಕುಳಿದುಕೊಳ್ಳುವ ಸೀಟ್ ನಲ್ಲಿ ಮಲಗಿಸಿದ್ದೇವೆ ಎಂದು ಅಸ್ವಸ್ಥ ಮಹಿಳೆಯ ಮಗಳು ಹೇಳಿದ್ದಾರೆ. ಕಾದು ಕಾದು ಸಿಬ್ಬಂದಿಗಳು ಚಿಕಿತ್ಸೆಗೆ ಮುಂದಾಗದ ಕಾರಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ತೆರಳಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕಡಬ ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಮಂಜುನಾಥ ಸಿ ಅವರು ಕಡಬ ಟೈಮ್ಸ್  ಜೊತೆ ಮಾತನಾಡಿ ಹಲ್ಲೆ ವಿಚಾರವಾದ ಕಾರಣ ಎಂ ಎಲ್ ಸಿ ಮಾಡುವುದು ಅಗತ್ಯ.ನನಗೆ ಸಿಬ್ಬಂದಿಗಳಿಂದ ಕರೆ ಬಂದಿದೆ ,ನಾನು ಪುತ್ತೂರಿಗೆ ರೆಫರ್ ಮಾಡುವಂತೆ ಸೂಚಿಸಿದ್ದೆ, ಇಲ್ಲವೇ ನಾನು ಬರುವವರೆಗೆ ಕಾಯಬೇಕು ಎಂದಿದ್ದೆ. ಆಸ್ಪತ್ರೆಯ ಸಿಬ್ಬಂದಿಗಳು ಹಿರಿಯ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.  ಮುಂದೆ ಸಮಸ್ಯೆಗಳು ಆಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು ಎಂದಿದ್ದಾರೆ.

Related Articles

Latest Articles