ಕುಕ್ಕೆ ಸುಬ್ರಹ್ಮಣ್ಯ: ಪೇ ಪಾರ್ಕಿಂಗ್ ಹೆಸರಿನಲ್ಲಿ ಅಧಿಕ ದರ ವಸೂಲಿ

ಸುದ್ದಿಯಾಗುತ್ತಿದಂತೆ ಪಾರ್ಕಿಂಗ್ ಸ್ಥಳದಲ್ಲಿ ಫಲಕಗಳು ಪ್ರತ್ಯಕ್ಷ!

kadaba times

ಕುಕ್ಕೆ ಸುಬ್ರಹ್ಮಣ್ಯ:  ರಾಜ್ಯದ ಹೆಸರಾಂತ  ಯಾತ್ರಾ ಕ್ಷೇತ್ರ ,ಆದಾಯದಲ್ಲೂ ರಾಜ್ಯದಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿರುವ   ಕಡಬ ತಾಲೂಕಿನ  ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಪೇ ಪಾರ್ಕಿಂಗ್‌ ವ್ಯವಸ್ಥೆಯನ್ನು ದೇವಸ್ಥಾನ ಆರಂಭಿಸಿದೆ.ಈ ಮೂಲಕ ಭಕ್ತರನ್ನು ಹಗಲು ದರೋಡೆ ಮಾಡಲಾಗುತ್ತಿದೆ ಎಂಬ ಆರೋಪಗಳು ವ್ಯಕ್ತವಾಗಿದೆ.

kadaba times
uniq

ಟೆಂಡರ್‌ ಪ್ರಕ್ರಿಯೆ ನಡೆದು ಈ ಪೇ ಪಾರ್ಕಿಂಗ್‌ ವ್ಯವಸ್ಥೆ ಜಾರಿಯಾಗಿದ್ದು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ರಸ್ತೆ ಬದಿ, ಸವಾರಿ ಮಂಟಪ ಬಳಿ, ರಥ ಬೀದಿ ಸಮೀಪದಲ್ಲಿ, ಬಂದಿಮಾಲು ಪ್ರದೇಶ, ಕಾಶಿಕಟ್ಟೆಬಳಿ ಮತ್ತಿತರ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್‌ ಮಾಡಬಹುದಾಗಿದೆ.ಆದರೆ ಪಾರ್ಕಿಂಗ್ ಶುಲ್ಕ ನೆಪದಲ್ಲಿ ಭಕ್ತರ ಜೀಬಿಗೆ ಕತ್ತರಿ ಹಾಕಲಾಗುತ್ತಿದ್ದು ಪೇ ಪಾರ್ಕಿಂಗ್ ಹೆಸರಲ್ಲಿ ನಿರ್ವಹಣಾ  ಸಿಬ್ಬಂದಿ ಅಧಿಕ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡಿತ್ತು.

ವಿವಿಧ ಪಾರ್ಕಿಂಗ್ ಸ್ಥಳಗಳನ್ನು ನಿರ್ವಹಿಸಲು ಚಿಕ್ಕಮಂಗಳೂರು ಜಿಲ್ಲೆಯ ಹೊಳೆನರಸೀಪುರದ ಜಮುನಾ ಹೆಚ್.ಎಂ ಅವರಿಗೆ ಟೆಂಟರ್ ಮೂಲಕ  ಒಪ್ಪಿಸಲಾಗಿತ್ತು .  ಈ ಪಾರ್ಕಿಂಗ್ ಸ್ಥಳಗಳಲ್ಲಿ ದ್ವಿಚಕ್ರ ವಾಹನಕ್ಕೆ ₹5, ತ್ರಿಚಕ್ರಕ್ಕೆ ₹10, ಕಾರುಗಳಿಗೆ ₹20, ಟ್ರಾವೆಲ್ಲರ್/ಟೆಂಪೋಗಳಿಗೆ ₹25 ಹಾಗೂ ಬಸ್/ಲಾರಿಗೆ ₹40 ಎಂಬಂತೆ ನಿಗದಿತ ಶುಲ್ಕವನ್ನು (24 ಗಂಟೆಗಳವರೆಗೆ) ವಸೂಲಿ ಮಾಡುವಂತೆ ಪೂರ್ವ ಆದೇಶ ಮಾಡಲಾಗಿತ್ತು.

kadaba times
kadaba times

ಆದರೆ ನಿಗದಿತ ದರದ ಫಲಕಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ಪ್ರದರ್ಶಿಸದೇ, ಹೆಚ್ಚುವರಿ ಶುಲ್ಕವನ್ನು ಭಕ್ತಾಧಿಗಳಿಂದ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿರುವುದರಿಂದ, ಜಮುನಾ ಹೆಚ್.ಎಂ. ಅವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ.  ಈ ನೋಟೀಸಿನಲ್ಲಿ, “ನಿಗದಿತ ದರಕ್ಕಿಂತ ಹೆಚ್ಚಾಗಿ ಶುಲ್ಕ ವಸೂಲಿ ಮಾಡಿದ ಬಗ್ಗೆ 24 ಗಂಟೆಗಳೊಳಗಾಗಿ ಲಿಖಿತ ಸಮಜಾಯಿಷಿ ಸಲ್ಲಿಸಬೇಕು. ತಪ್ಪಿದಲ್ಲಿ ದೇವಾಲಯಕ್ಕೆ ಜಮಾ ಮಾಡಿದ ಹಣವನ್ನು ಮುಟ್ಟುಗೋಲು ಹಾಕಿ, ನಿಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು”ಎಂದು ಎಚ್ಚರಿಸಲಾಗಿದೆ.

ದೇವಾಲಯದ ಆಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಭಕ್ತಾಧಿಗಳು  ಅನ್ಯಾಯಕ್ಕೆ ಒಳಗಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.ಈ ಎಲ್ಲಾ ಬೆಳವಣಿಗೆಗಳ ನಡುವೆ ಪಾರ್ಕಿಂಗ್ ಸ್ಥಳದಲ್ಲಿ ಫಲಕಗಳು ಪ್ರತ್ಯಕ್ಷಗೊಂಡಿದೆ.

Related Articles

Latest Articles