ಕಡಬ: ಮಸೀದಿ ಮುಂಭಾಗ ಬೈಕ್‌ಗಳ ನಡುವೆ ಅಪಘಾತ: ಬೈಕ್ ಸವಾರ ಆಸ್ಪತ್ರೆಗೆ ದಾಖಲು

kadaba times

ಕಡಬ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವ್ಯಕ್ತಿಯ ಮೋಟಾರ್ ಸೈಕಲ್‌ಗೆ ಹಿಂದಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ  ಕಳಾರ ಮಸೀದಿ ಮುಂಭಾಗ ನಡೆದಿದೆ.

kadaba times
uniq

ಅಪಘಾತದಲ್ಲಿ ತೆಮರಡ್ಡ ನಿವಾಸಿ ಇಬ್ರಾಹಿಂ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜುಲೈ 19ರಂದು ಸಂಜೆ ಕಳಾರ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿಕೊಂಡು ತಮ್ಮ ಮೋಟಾರ್ ಸೈಕಲ್ ನಲ್ಲಿ  ತೆಮನೆಗೆ ತೆರಳುತ್ತಿದ್ದರು. ಈ ವೇಳೆಗೆ ಮಸೀದಿ ಎದುರುಗಡೆ ತಮ್ಮ ಬೈಕ್‌ನ ಬಲಬದಿಯ ಇಂಡಿಕೇಟರ್ ಹಾಕಿ ನಿಧಾನವಾಗಿ ಬಲಕ್ಕೆ ತಿರುಗಿಸುತ್ತಿದ್ದರು. ಈ ವೇಳೆ ಕಡಬ ಕಡೆಯಿಂದ ಬಂದ ಶಿವರಾಮ ಎಂಬವರು ತಮ್ಮ ಮೋಟಾರ್ ಸೈಕಲನ್ನು  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ.

kadaba times
kadaba times

ಡಿಕ್ಕಿಯ ರಭಸಕ್ಕೆ ಇಬ್ರಾಹಿಂ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ತಲೆ, ಕಿವಿ, ಬಲಭುಜ, ಬಲತೊಡೆ ಹಾಗೂ ಬಲಕಾಲಿನ ಪಾದಕ್ಕೆ ತೀವ್ರ ರಕ್ತಗಾಯಗಳಾಗಿವೆ. ಅಪಘಾತ ಪಡಿಸಿದ ಸವಾರ ಶಿವರಾಮ ಕೂಡ ರಸ್ತೆಗೆ ಬಿದ್ದಿದ್ದರೂ, ಅವರಿಗೆ ಯಾವುದೇ ಗಾಯಗಳಾಗಿಲ್ಲ.ಸ್ಥಳದಲ್ಲಿದ್ದವರು  ತಕ್ಷಣವೇ ಗಾಯಾಳುವನ್ನು  ಆಂಬುಲೆನ್ಸ್ ಮೂಲಕ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ  ಖಾಸಗಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕಡಬ ಗ್ರಾಮದ ತೆಮರಡ್ಡ ನಿವಾಸಿ ಮಹಮ್ಮದ್ ಆರೀಸ್ ಟಿ (41) ಅವರು ನೀಡಿದ ದೂರಿನಂತೆ, ಅಪಘಾತ ಎಸಗಿದ ಸವಾರ ಶಿವರಾಮ ವಿರುದ್ಧ ಕಡಬ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 281, 125(a) ರಂತೆ ಅಪರಾಧ ಸಂಖ್ಯೆ 94/2026 ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

Latest Articles