ಬಿಳಿನೆಲೆಯಲ್ಲಿ ಕಾರು ನಿಲ್ಲಿಸಿ ಯುವಕನ ಮೇಲೆ ಹಲ್ಲೆ: ಬಿಡಿಸಲು ಬಂದವರಿಗೂ ಬೆದರಿಕೆ- ಮೂವರ ವಿರುದ್ಧ FIR

kadaba times

ಕಡಬ: ಕಾರಿನಲ್ಲಿ ಪೆಟ್ರೋಲ್ ಹಾಕಿಸಲು ಹೋಗುತ್ತಿದ್ದಾಗ ಮಾರ್ಗಮಧ್ಯೆ ಕಾರು ಅಡ್ಡಹಾಕಿ ಯುವಕನೊಬ್ಬನ ಮೇಲೆ ಹಾಗೂ ಹಲ್ಲೆಯನ್ನು ಬಿಡಿಸಲು ಬಂದ ಆತನ ಸ್ನೇಹಿತರ ಮೇಲೆಯೂ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನಡೆದಿದೆ.

kadaba times
uniq

ಘಟನೆಯಲ್ಲಿ ಗಾಯಗೊಂಡವರು  ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಳಿನೆಲೆ ಗ್ರಾಮದ ನಿವಾಸಿ, ವೃತ್ತಿಯಲ್ಲಿ ಚಾಲಕರಾಗಿರುವ ಸುನಿಲ್ (25) ಎಂಬವರು ಜುಲೈ 16ರಂದು ಸಂಜೆ ತಮ್ಮ ಕಾರಿನಲ್ಲಿ ಬಿಳಿನೆಲೆ ಕೈಕಂಬದ ಪೆಟ್ರೋಲ್ ಪಂಪ್‌ಗೆ ಪೆಟ್ರೋಲ್ ಹಾಕಿಸಲು ತೆರಳುತ್ತಿದ್ದರು. ಬಿಳಿನೆಲೆ ಎಂಬಲ್ಲಿ ಹಂಪ್ಸ್ ಬಳಿ ಕಾರು ನಿಲ್ಲಿಸಿದ್ದಾಗ, ಎದುರುಗಡೆಯಿಂದ ಬಂದ ಆಲ್ಟೋ ಕಾರನ್ನು ಅವರ ಪಕ್ಕದಲ್ಲಿ ನಿಲ್ಲಿಸಲಾಗಿತ್ತು.

kadaba times
kadaba times

ಆಲ್ಟೋ ಕಾರಿನಿಂದ ಕೆಳಗಿಳಿದ ಅವಿನಾಶ್ ಎಂಬಾತ ಸುನಿಲ್ ಅವರ ಎಡ ಕೆನ್ನೆಗೆ ಬಾರಿಸಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಬಳಿಕ ಅವರೊಂದಿಗೆ ಇದ್ದ ಚಂದ್ರಶೇಖರ, ಸತೀಶ ಕಳಿಗೆ ಹಾಗೂ ಅವಿನಾಶ್ ಸೇರಿಕೊಂಡು ಸುನಿಲ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ದೂರಲಾಗಿದೆ. ಇದೇ ವೇಳೆ ಆ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಬಂದ ಸುನಿಲ್ ಅವರ ಪರಿಚಯದ ಮನೋಜ್ ಮತ್ತು ಮನ್ವಿತ್ ಎಂಬುವವರು ಹಲ್ಲೆಯನ್ನು ಬಿಡಿಸಲು ಮುಂದಾಗಿದ್ದಾರೆ. ಆದರೆ ಆರೋಪಿಗಳು ಅವರಿಬ್ಬರ ಮೇಲೆಯೂ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಮೂವರೂ ಜುಲೈ 17ರಂದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳು ಸುನಿಲ್ ನೀಡಿದ ದೂರಿನಂತೆ, ಕಡಬ ಪೊಲೀಸರು ಆರೋಪಿಗಳಾದ ಅವಿನಾಶ್, ಚಂದ್ರಶೇಖರ ಹಾಗೂ ಸತೀಶ ಕಳಿಗೆ ಎಂಬವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 352, 351(2), 115(2), 118(1), r/w 3(5) ರಂತೆ ಅಪರಾಧ ಸಂಖ್ಯೆ 92/2026 ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Related Articles

Latest Articles