ಕಡಬಕ್ಕೆ ನೂತನ ತಹಶೀಲ್ದಾರ್ ನೇಮಿಸಿದ ರಾಜ್ಯ ಸರ್ಕಾರ

kadaba times

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿಗೆ ನೂತನ ತಹಶೀಲ್ದಾರ್ ಆಗಿ ಜಿ. ಗಣೇಶ್ ಸವಣೂರ ಅವರು ನೇಮಕಗೊಂಡಿದ್ದಾರೆ.

kadaba times
uniq

ರಾಜ್ಯ ಕಂದಾಯ ಇಲಾಖೆಯು ಜುಲೈ 14 ರಂದು ಹೊರಡಿಸಿರುವ ತಹಶೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2 ವೃಂದದ ಅಧಿಕಾರಿಗಳ ವರ್ಗಾವಣೆ ಹಾಗೂ ಸ್ಥಳನಿಯುಕ್ತಿ ಅಧಿಸೂಚನೆಯಲ್ಲಿ ಕಡಬ ತಾಲೂಕಿಗೆ ನೂತನ ಅಧಿಕಾರಿಯನ್ನು ನಿಯೋಜಿಸಲಾಗಿದೆ.

ಖಾಲಿ ಹುದ್ದೆಗೆ ನಿಯುಕ್ತಿ:ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನಲ್ಲಿ ತಹಶೀಲ್ದಾರ್ ಗ್ರೇಡ್-2 ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿ. ಗಣೇಶ್ ಸವಣೂರ ಅವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ತಹಶೀಲ್ದಾರ್ ಗ್ರೇಡ್-1 ವೃಂದಕ್ಕೆ ಕಡಬ ತಾಲೂಕಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ.

kadaba times
kadaba times

ರಾಜ್ಯಪಾಲರ ಆದೇಶದಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಜೆ.ಕೆ. ಅವರು ಈ ಅಧಿಕೃತ ಆದೇಶವನ್ನು ಹೊರಡಿಸಿದ್ದು, ವರ್ಗಾವಣೆಗೊಂಡಿರುವ ಅಧಿಕಾರಿಗಳು ತಕ್ಷಣವೇ ಹೊಸ ಹುದ್ದೆಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ತಾಲೂಕಿನಲ್ಲಿ ಕಳೆದ ಕೆಲವು ಸಮಯದಿಂದ ಖಾಲಿ ಇದ್ದ ತಹಶೀಲ್ದಾರ್ ಹುದ್ದೆಗೆ ಕೊನೆಗೂ ಹೊಸ ಅಧಿಕಾರಿಯ ನೇಮಕವಾಗಿದ್ದು, ಸಾರ್ವಜನಿಕ ಕೆಲಸ ಕಾರ್ಯಗಳು ಇನ್ನು ಮುಂದೆ ಸುಗಮವಾಗಿ ಸಾಗುವ ನಿರೀಕ್ಷೆಯಿದೆ.

Related Articles

Latest Articles