Instagram post: ಪ್ರಚೋದನಕಾರಿ ಪೋಸ್ : “ಕರಾವಳಿ ಟೈಗರ್ಸ್” ತಮಿಳುನಾಡಿನಲ್ಲಿ ಬಂಧನ!

kadaba times

ದಕ್ಷಿಣ ಕನ್ನಡ:  ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿರುವ ಆರೋಪದಲ್ಲಿ ಯುವಕನೋರ್ವನನ್ನು ಮಂಗಳೂರು ನಗರ ಸಿ.ಇ.ಎನ್ ಅಪರಾಧ ಠಾಣೆಯ ಪೊಲೀಸರು ತಮಿಳುನಾಡಿನಲ್ಲಿ ಪತ್ತೆ  ಬಂಧಿಸಿದ್ದಾರೆ.

kadaba times
uniq

ಮಲವಂತಿಗೆಯ ಕಿಲ್ಲೂರು ಮನೆ ನಿವಾಸಿ ಮುಹಮ್ಮದ್ ಕೈಫ್(22) ಬಂಧಿತ ಆರೋಪಿ.ಈತ Karavali_tigers ಎಂಬ Instagram ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಕೈಫ್ ವಿರುದ್ಧ  ಜುಲೈ 19ರಂದು ಪ್ರಕರಣ ದಾಖಲಾಗಿತ್ತು.

ತಾಂತ್ರಿಕ ಸಾಕ್ಷ್ಯಗಳ ಮುಖಾಂತರ ಪತ್ತೆ ಮಾಡಿ, ಆರೋಪಿ ತಮಿಳುನಾಡಿಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

kadaba times
kadaba times

Karavali_tigers ಎಂಬ ಪೇಜ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Latest Articles