ಕೆಪಿಸಿಸಿ ನೂತನ ಸಾರಥಿ ಬಿ. ಕೆ. ಹರಿಪ್ರಸಾದ್‌ಗೆ ಕಡಬ ತಾಲೂಕು ಬಿಲ್ಲವ ಸಂಘದಿಂದ ಗೌರವಾರ್ಪಣೆ

kadaba times

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ನೂತನ ಅಧ್ಯಕ್ಷರಾಗಿ ನಿಯುಕ್ತರಾಗಿರುವ  ಬಿ. ಕೆ. ಹರಿಪ್ರಸಾದ್ ಅವರನ್ನು ಕಡಬ ತಾಲೂಕಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ವತಿಯಿಂದ ಮಂಗಳೂರಿನಲ್ಲಿ ಜೂನ್ 23ರಂದು ಮಂಗಳವಾರ ಭೇಟಿ ಮಾಡಿ ಗೌರವಿಸಲಾಯಿತು.

kadaba times
uniq

ಇತ್ತೀಚೆಗಷ್ಟೇ ಕೆಪಿಸಿಸಿ ಚುಕ್ಕಾಣಿ ಹಿಡಿದಿರುವ ಬಿ. ಕೆ. ಹರಿಪ್ರಸಾದ್ ಅವರು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಕಡಬ ತಾಲೂಕು ಬಿಲ್ಲವ ಸಂಘದ ಪದಾಧಿಕಾರಿಗಳ ನಿಯೋಗವು ಅವರನ್ನು ಪ್ರೀತಿಯಿಂದ ಭೇಟಿಯಾಯಿತು. ಈ ವೇಳೆ ನೂತನ ಅಧ್ಯಕ್ಷರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ  ಆತ್ಮೀಯವಾಗಿ ಗೌರವಿಸಿ, ಅವರ ಮುಂದಿನ ರಾಜಕೀಯ ಇಚ್ಛಾಶಕ್ತಿಗೆ ಹಾಗೂ ಪಕ್ಷದ ಸಂಘಟನಾ ಕಾರ್ಯಗಳಿಗೆ  ಶುಭಾಶಯ ಕೋರಲಾಯಿತು.

kadaba times
kadaba times

ಈಭೇಟಿಯ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಕಡಬ ತಾಲೂಕು ಇದರ ಅಧ್ಯಕ್ಷ ಸತೀಶ್ ಕೆ. ಐತ್ತೂರು, ಸಂಘದ ಜೊತೆ ಕಾರ್ಯದರ್ಶಿ ಕೃಷ್ಣಪ್ಪ ಅಮೈ  ಸೇರಿದಂತೆ ಪ್ರಮುಖರು ಜತೆಗಿದ್ದರು.

Related Articles

Latest Articles