
ನೆಲ್ಯಾಡಿ: ಇಲ್ಲಿನ ಶಿವಳ್ಳಿ ಸಂಪದ ನೆಲ್ಯಾಡಿ ವಲಯದ ಮಹಾಸಭೆಯು ಇತ್ತೀಚೆಗೆ ರವಿಪ್ರಸಾದ್ ಆಚಾರ್ ಪಂಜಿಕಂಡ ಅವರ ಗೃಹದಲ್ಲಿ ಜರುಗಿತು. ವಲಯದ ಅಧ್ಯಕ್ಷ ರಾಜೇಶ್ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.


ನೂತನ ಅಧ್ಯಕ್ಷರಾಗಿ ಹರಿಪ್ರಸಾದ್ ಭಟ್, ಕಾರ್ಯದರ್ಶಿಯಾಗಿ ರವೀಂದ್ರ ಮಾಸ್ಟರ್ ಹಾಗೂ ತಾಲೂಕು ಪ್ರತಿನಿಧಿಯಾಗಿ ಸತೀಶ್ ಮೂಡಂಬಡಿತ್ತಾಯ ‘ದುರ್ಗಾಶ್ರೀ’ ಅವರು ಸರ್ವಾನುಮತದಿಂದ ಆಯ್ಕೆಯಾದರು.
ಇತರ ಪದಾಧಿಕಾರಿಗಳ ವಿವರ: ಗೌರವಾಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್, ಉಪಾಧ್ಯಕ್ಷರಾಗಿ ರಾಧಾಕೃಷ್ಣ ಬಿ.ಕೆ., ಡಾ. ಮುರಳೀಧರ ಹಾಗೂ ಸುಕುಮಾರ ಎಡಪಡಿತ್ತಾಯ, ಕೋಶಾಧಿಕಾರಿಯಾಗಿ ಆರ್. ವೆಂಕಟರಮಣ, ಜೊತೆ ಕಾರ್ಯದರ್ಶಿಯಾಗಿ ಧನಲಕ್ಷ್ಮೀ ಬಾಳ್ತಿಲ್ಲಾಯ ಕುಂಡಡ್ಕ ಆಯ್ಕೆಯಾದರು. ನಿರ್ದೇಶಕರುಗಳಾಗಿ ರವಿಪ್ರಸಾದ್ ಆಚಾರ್, ಡಾ. ಸುಬ್ರಹ್ಮಣ್ಯ ಶಬರಾಯ, ವಿದ್ವಾನ್ ಶ್ರೀಕಾಂತ ಕುಂಜಹ್ಣ್ಣಾಯ ಹಾಗೂ ಪುರೋಹಿತ್ ರಾಧಾಕೃಷ್ಣ ಜೋಗಿತ್ತಾಯ ಆಯ್ಕೆಯಾಗಿದ್ದಾರೆ.


ಮಹಿಳಾ ಸಂಪದದ ಅಧ್ಯಕ್ಷೆಯಾಗಿ ಶಶಿಕಲಾ ಶಬರಾಯ, ಕಾರ್ಯದರ್ಶಿಯಾಗಿ ಗೀತಾ ಪಂಜಿಕಂಡ ಹಾಗೂ ಯುವ ಸಂಪದದ ಅಧ್ಯಕ್ಷರಾಗಿ ಪುರೋಹಿತ ಆದಿತ್ಯ ಪಿ.ವಿ. ಅವರನ್ನು ಆರಿಸಲಾಯಿತು.
ವಿಶೇಷ ಆಹ್ವಾನಿತರಿಗೆ ಸನ್ಮಾನ:ಪುತ್ತೂರು ತಾಲೂಕು ಶಿವಳ್ಳಿ ಸಂಪದದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿ, ವಲಯದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಅವರನ್ನು ವಲಯದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸದಸ್ಯರಿಂದ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಠಣ ನಡೆಯಿತು. ಶ್ರೇಯಸ್ ‘ದುರ್ಗಾಶ್ರೀ’ ಪ್ರಾರ್ಥಿಸಿದರು. ಗೀತಾ ಆಚಾರ್ ಪಂಜಿಕಂಡ ನೀತಿ ಸಂಹಿತೆ ವಾಚಿಸಿದರು. ತಾಲೂಕು ಪ್ರತಿನಿಧಿ ಸತೀಶ್ ಮೂಡಂಬಡಿತ್ತಾಯ ಅವರು ಕಳೆದ ಸಾಲಿನ ಕಾರ್ಯಕ್ರಮಗಳು, ವಿತ್ತೀಯ ನಿರ್ವಹಣೆ ಹಾಗೂ ಸಭೆಯ ಉದ್ದೇಶಗಳನ್ನು ವಿವರಿಸಿದರು. ನಿಕಟಪೂರ್ವ ಅಧ್ಯಕ್ಷ ರಾಜೇಶ್ ಭಟ್ ಸ್ವಾಗತಿಸಿ, ನಿಕಟಪೂರ್ವ ಕಾರ್ಯದರ್ಶಿ ಆದಿತ್ಯ ಟಿ.ವಿ. ವಂದಿಸಿದರು. ಪಂಜಿಕಂಡ ಕುಟುಂಬಸ್ಥರು ಆತಿಥ್ಯ ನೀಡಿ ಸಹಕರಿಸಿದರು. ಭಗವದ್ಭಕ್ತರು ಹಾಗೂ ಸಂಘದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು
