
ಕಡಬ: ಸ್ಥಳೀಯ ನಾಗರಿಕರಿಗೆ ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಕಡಬ ಮೆಡಿಕಲ್ ಸೆಂಟರ್, ಇದೀಗ ಮಂಗಳೂರಿನ ಪ್ರಸಿದ್ಧ ಕೆ.ಎಂ.ಸಿ ಆಸ್ಪತ್ರೆ (KMC Hospital) ಯ ಸಹಭಾಗಿತ್ವದಲ್ಲಿ ವಿಶೇಷ ವೈದ್ಯಕೀಯ ಸಮಾಲೋಚನೆ ಮತ್ತು ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ.


ನಾಳೆ ಮೇ 31ರ ಆದಿತ್ಯವಾರದಂದು ಕಡಬದ ಕಲಾರದಲ್ಲಿರುವ ಮಾಂಡೋವಿ ಶೋರೂಂ ಮುಂಭಾಗದ ಕಡಬ ಮೆಡಿಕಲ್ ಸೆಂಟರ್ನಲ್ಲಿ ಈ ಸಮಾಲೋಚನೆ ಲಭ್ಯವಿರಲಿದೆ.
ಹೃದಯ ರೋಗ ತಪಾಸಣೆ – ಈಗ ನಿಮ್ಮ ಕಡಬದಲ್ಲೇ!
ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಹೃದಯ ರೋಗ ವಿಭಾಗದ ಮುಖ್ಯಸ್ಥರಾದ (Head of Cardiology) ಖ್ಯಾತ ಹೃದಯ ರೋಗ ತಜ್ಞ ಡಾ. ನರಸಿಂಹ ಪೈ (Dr. Narasimha Pai) ಅವರು ಮೇ 31ರ ಆದಿತ್ಯವಾರ ಮಧ್ಯಾಹ್ನ 4:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಕಡಬ ಮೆಡಿಕಲ್ ಸೆಂಟರ್ನಲ್ಲಿ ಲಭ್ಯವಿರಲಿದ್ದಾರೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಇತ್ತೀಚಿನ ಲಕ್ಷಣಗಳು ಹಾಗೂ ತಪಾಸಣೆಗಾಗಿ ಸಾರ್ವಜನಿಕರು ಇವರ ನೇರ ಸಮಾಲೋಚನೆ ಪಡೆಯಬಹುದಾಗಿದೆ.


ಒಂದೇ ಕಡೆ ಮೂಳೆ ತಜ್ಞರು ಮತ್ತು ರೇಡಿಯಾಲಜಿಸ್ಟ್ ಲಭ್ಯ
ಇದೇ ದಿನ (ಮೇ 31, ಆದಿತ್ಯವಾರ) ಬೆಳಿಗ್ಗೆಯೂ ಸಹ ತಜ್ಞ ವೈದ್ಯರು ಸ್ಥಳದಲ್ಲೇ ಚಿಕಿತ್ಸೆ ಮತ್ತು ಸಲಹೆಗಳನ್ನು ನೀಡಲಿದ್ದಾರೆ. ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 03 :00 ಗಂಟೆಯವರೆಗೆ ಈ ಕೆಳಗಿನ ತಜ್ಞರು ಲಭ್ಯವಿರುತ್ತಾರೆ
- ಡಾ. ಅಜಯ್ ಎಂ.ಬಿ (MBBS, MS Orthopaedics) – ಆರ್ಥೋಪೆಡಿಕ್ (ಮೂಳೆ) ತಜ್ಞರು: ಮೂಳೆ, ಕೀಲು ನೋವು ಹಾಗೂ ಸಂಧಿವಾತದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ.
- ಡಾ. ರಾಧಿಕಾ ಡಿ. (MBBS, MD Radio-diagnosis) – ರೇಡಿಯಾಲಜಿಸ್ಟ್: ಸ್ಥಳದಲ್ಲೇ ರೇಡಿಯಾಲಜಿ ಮತ್ತು ಸ್ಕ್ಯಾನಿಂಗ್ ಸಂಬಂಧಿತ ಸಲಹೆಗಳನ್ನು ನೀಡಲಿದ್ದಾರೆ.
ಮುಂಗಡ ನೋಂದಣಿಗೆ ಅವಕಾಶ: ದೂರದ ಮಂಗಳೂರಿಗೆ ಅಲೆಯುವುದನ್ನು ತಪ್ಪಿಸಿ, ಕಡಬದಲ್ಲೇ ಅತ್ಯಾಧುನಿಕ ಹಾಗೂ ಪ್ರಸಿದ್ಧ ವೈದ್ಯರ ಸೇವೆಯನ್ನು ಪಡೆದುಕೊಳ್ಳಲು ಕಡಬ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಸೀಮಿತ ಸಮಯಾವಕಾಶ ಇರುವುದರಿಂದ ರೋಗಿಗಳು ಮುಂಗಡವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
- ಸ್ಥಳ: ಕಡಬ ಮೆಡಿಕಲ್ ಸೆಂಟರ್, ಮಾಂಡೋವಿ ಶೋರೂಂ ಮುಂಭಾಗ,ಕಲಾರ, ಕಡಬ.
- ಮುಂಗಡ ನೋಂದಣಿಗಾಗಿ ಸಂಪರ್ಕಿಸಿ: +91 78995 55300
