ಕಡಬದ ಜ್ಞಾನಸುಧಾ ಮೊಂಟೆಸ್ಸರಿ ಸಂಸ್ಥೆಗೆ ಸತತ 4ನೇ ಬಾರಿ ಶೇ.100 ಫಲಿತಾಂಶ; ಪ್ರವೇಶಾತಿ ಆರಂಭ | Kadaba Jnanasudha Montessori Result

kadaba times

ಕಡಬ: ಇಲ್ಲಿನ ಪ್ರಸಿದ್ಧ ಜ್ಞಾನಸುಧಾ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ (ಡಿ.ಎಂ.ಇ.ಡಿ) ಸಂಸ್ಥೆಯು ಸತತ ನಾಲ್ಕನೇ ಬಾರಿಗೆ ಶೇಕಡಾ 100ರಷ್ಟು ಅಭೂತಪೂರ್ವ ಫಲಿತಾಂಶ ದಾಖಲಿಸಿ ಸಾಧನೆ ಮಾಡಿದೆ.

kadaba times
uniq

ವರ್ಲ್ಡ್ ಸ್ಕಿಲ್ ಕೌನ್ಸಿಲ್‌ನಿಂದ ಮಾನ್ಯತೆ ಪಡೆದಿರುವ ಹಾಗೂ ಭಾರತ ಸರ್ಕಾರದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ ‘ಭಾರತ್ ಸೇವಕ್ ಸಮಾಜ’ದ ಅಂಗೀಕೃತ ಸಂಸ್ಥೆಯಾದ ಜ್ಞಾನಸುಧಾದ ವಿದ್ಯಾರ್ಥಿನಿಯರು ಈ ಬಾರಿ ಭರ್ಜರಿ ಯಶಸ್ಸು ಗಳಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 25 ವಿದ್ಯಾರ್ಥಿ ಶಿಕ್ಷಕಿಯರೂ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 22 ಮಂದಿ ವಿಶಿಷ್ಟ ಶ್ರೇಣಿಯಲ್ಲಿ (Distinction) ಹಾಗೂ ಮೂವರು ಪ್ರಥಮ ದರ್ಜೆಯಲ್ಲಿ (First Class) ತೇರ್ಗಡೆಯಾಗುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸಾಧಕರು:

ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಪಾಸ್ ಆದ ವಿದ್ಯಾರ್ಥಿನಿಯರ ವಿವರ ಹೀಗಿದೆ: ನಳಿನಾಕ್ಷಿ ಕೆ ಎಂ (1,143 ಅಂಕ), ವಂದನಾ ಕೆ (1,133), ಗಾಯತ್ರಿ ಬಿ (1,128), ವಿದ್ಯಾ ಬಿ (1,117), ರಕ್ಷಿತಾ ಎಸ್ ಆರ್ (1,114), ಶಶಿಕಲಾ ಕೆ ಎಸ್ (1,082), ದಿವ್ಯಶ್ರೀ ಕೆ (1,081), ರಮ್ಯಾ ಕೆ (1,064), ಕಾವ್ಯಶ್ರೀ (1,062), ಅಭಿದಾ ಬಾನು (1,050), ಚೈತನ್ಯ ವಿ (1,042), ಕವಿತಾ ಎನ್ (1,038), ಪ್ರಭಾವತಿ ಎ ಜಿ (1,036), ಶಾನಿಯಾ (1,033), ತೌಸೀನಾ ಎಂ (1,033), ವಿಂದ್ಯಾಪಿ ಎಸ್ (1,031), ಲಾವಣ್ಯ ಪಿ (1,027), ನವ್ಯಶ್ರೀ ಎಂ ಎಸ್ (1,027), ಮೋಹಿನಿ ಡಿ (1,024), ಸಮೀರಾ ಬಾನು (1,021), ಲತಾಕ್ಷಿ (987) ಮತ್ತು ದೀಪಾ ಎನ್ (973).

kadaba times
kadaba times

ವಿದ್ಯಾರ್ಥಿ ಶಿಕ್ಷಕಿಯರಾದ ಶ್ರುತಿ ಬಿ, ಜೆನಿಫರ್ ತೋಮಸ್ ಹಾಗೂ ಸವಿತಾ ಜೆ ಕೆ ಅವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸತತವಾಗಿ ಶೇ.100 ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳನ್ನು ಮತ್ತು ಬೋಧಕ ಸಿಬ್ಬಂದಿಯನ್ನು ಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದೆ.

2026-27ನೇ ಸಾಲಿನ ಪ್ರವೇಶಾತಿ ಆರಂಭ

ಉತ್ತಮ ಭವಿಷ್ಯ ಕಲ್ಪಿಸುವ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಕೋರ್ಸ್ ಪಡೆಯಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಿದ್ದು, ಸಂಸ್ಥೆಯಲ್ಲಿ 2026-2027ನೇ ಸಾಲಿನ ಹೊಸ ಬ್ಯಾಚ್‌ಗಳ ಪ್ರವೇಶಾತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.ಕೋವಿಡ್ ಅಥವಾ ಇತರ ಕಾರಣಗಳಿಂದ ಶಿಕ್ಷಣ ಅರ್ಧಕ್ಕೆ ನಿಂತವರು, ಗೃಹಿಣಿಯರು ಹಾಗೂ ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ಉಳ್ಳವರು ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿ ಹಾಗೂ ಸೀಟು ಕಾಯ್ದಿರಿಸುವಿಕೆಗಾಗಿ ಸಂಸ್ಥೆಯ ಸಂಚಾಲಕರಾದ ಜನಾರ್ಧನ್ ಬಿ ಎಲ್ (ಮೊಬೈಲ್ ಸಂಖ್ಯೆ: 9481229381) ಅವರನ್ನು ಸಂಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.

Related Articles

Latest Articles