
ಕಡಬದ ಐತ್ತೂರಿನಲ್ಲಿ ಬೆಂಗಳೂರು ಮೂಲದ ತಂಡವಿದ್ದ ಮನೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಪೂರ್ಣ ವಿವರ ಇಲ್ಲಿದೆ.


ಕಡಬ: ಮಹಿಳೆಯರು ಮತ್ತು ಮಕ್ಕಳನ್ನು ಸೇರಿಸಿಕೊಂಡು ಅನುಮಾನಾಸ್ಪದ ಚಟುವಟಿಕೆ ಮಾಡುತ್ತಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಕಡಬ ಪೊಲೀಸರು ಐತ್ತೂರು ಗ್ರಾಮದ ಮನೆಯೊಂದರ ಮೇಲೆ ಮೇ 7ರ ರಾತ್ರಿ ಎಂಟ್ರಿಕೊಟ್ಟಿದ್ದಾರೆ .
ಐತ್ತೂರು ಗ್ರಾಮದ ಖಾಸಗಿ ಮನೆಯೊಂದರಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿವೆ ಎಂಬ ವದಂತಿ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಕಡಬ ಪೊಲೀಸರು ತಡರಾತ್ರಿ ಸ್ಥಳಕ್ಕೆ ಧಾವಿಸಿದ್ದಾರೆ. ಮನೆಯಲ್ಲಿ ಬೆಂಗಳೂರು ಮೂಲದ ಸುಮಾರು 10ಕ್ಕೂ ಹೆಚ್ಚು ಮಂದಿ ಪುರುಷರು, ಮಹಿಳೆಯರು ಹಾಗೂ ಮಕ್ಕಳಿದ್ದರು ಎಂದು ತಿಳಿದುಬಂದಿದೆ.


ಪೊಲೀಸರಿಂದ ತಪಾಸಣೆ: ರಾತ್ರಿಯಾಗಿದ್ದರಿಂದ, ನಿಯಮದಂತೆ ಪೊಲೀಸರು ಮನೆಯೊಳಗೆ ಪ್ರವೇಶಿಸದೆ ಹೊರಭಾಗದಲ್ಲೇ ಬಿಗಿ ಕಾವಲು ನಡೆಸಿದರು. ಮುಂಜಾನೆ ವೇಳೆ ಮನೆಯಲ್ಲಿದ್ದವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನಿಂದ ಇಲ್ಲಿಗೆ ಬಂದ ಉದ್ದೇಶವೇನು ಮತ್ತು ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಮನೆಯಲ್ಲಿದ್ದ ಎಲ್ಲರನ್ನೂ ಕಡಬ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಹೆಚ್ಚಿನ ಅಪ್ಡೇಟ್ಗಳಿಗಾಗಿ ನಮ್ಮ ವೆಬ್ಸೈಟ್ ಗಮನಿಸುತ್ತಿರಿ.
