ಪತ್ನಿಯ ಹಣೆಗೆ ಮೊಬೈಲ್‌ನಿಂದ ಹಲ್ಲೆ, ಜೀವ ಬೆದರಿಕೆ ಆರೋಪ: ಪತಿ ಹಾಗೂ ಅತ್ತೆಯ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

kadaba times

ಕಡಬದ ಉಳಿಪ್ಪುವಿನಲ್ಲಿ ಪತ್ನಿಯ ಮೇಲೆ ಪತಿ ಮತ್ತು ಅತ್ತೆಯಿಂದ ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ: ಇಲ್ಲಿನ ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ಎಂಬಲ್ಲಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಮೊಬೈಲ್ ಫೋನ್‌ನಿಂದ ಹಲ್ಲೆ ನಡೆಸಿದಲ್ಲದೆ ಜೀವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪತಿ ಹಾಗೂ ಅತ್ತೆಯ  ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರುದಾರೆ ಅನಿಟ್ ಮರಿಯ ಜೋಸೆಫ್ ಅವರು ಕಳೆದ 9 ವರ್ಷಗಳ ಹಿಂದೆ ಸುನಿಲ್ ಬಿ.ಎನ್. ಅವರನ್ನು ವಿವಾಹವಾಗಿದ್ದರು. ಮದುವೆಯ ಆರಂಭದಲ್ಲಿ ದಂಪತಿಗಳು ಬೆಂಗಳೂರಿನಲ್ಲಿ ವಾಸವಾಗಿದ್ದರು. ಅನಿಟ್ ಅವರಿಗೆ ಹೆಣ್ಣು ಮಗು ಜನಿಸಿದ ಬಳಿಕ ಪತಿ ಸುನಿಲ್ ಅವರು ವಿನಾಕಾರಣ ಕಿರುಕುಳ ನೀಡಲು ಪ್ರಾರಂಭಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕಿರುಕುಳಕ್ಕೆ ಅತ್ತೆ ಲೀಲಮ್ಮ ಅವರು ಕೂಡ ಸಹಕರಿಸುತ್ತಿದ್ದರು ಎನ್ನಲಾಗಿದೆ.

kadaba times
kadaba times

ಹಲ್ಲೆ ಮತ್ತು ಬೆದರಿಕೆ: ಏಪ್ರಿಲ್ 18ರಂದು ರಾತ್ರಿ ಉಳಿಪ್ಪುವಿನ ಮನೆಯಲ್ಲಿ ಅತ್ತೆ ಲೀಲಮ್ಮ ಅವರು ಜಗಳ ತೆಗೆದು, ಅನಿಟ್ ಅವರ ಎಡ ಹಣೆಗೆ ಮೊಬೈಲ್ ಫೋನ್‌ನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವಗೊಂಡ ಅನಿಟ್ ಅವರು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು, ಪ್ರಸ್ತುತ ಬೆಳ್ತಂಗಡಿಯ ಕಳಂಜದಲ್ಲಿರುವ ತಮ್ಮ ತಂದೆಯ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಇಷ್ಟೇ ಅಲ್ಲದೆ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಪತಿ ಸುನಿಲ್ ಅವರು ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಕಡಬ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 85, 118(1), 351(3) ರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related Articles

Latest Articles