ಕಾಂಗ್ರೆಸ್‌ನದ್ದು ನರಿ ಬುದ್ಧಿ: ಶಾಸಕಿ ಭಾಗಿರಥಿ ಮುರುಳ್ಯ ವಾಗ್ದಾಳಿ

kadaba times

ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳ ಧೋರಣೆಯನ್ನು ಖಂಡಿಸಿ ಸುಳ್ಯ ಮಹಿಳಾ ಮೋರ್ಚಾ ವತಿಯಿಂದ ಜನಾಕ್ರೋಶ ಸಭೆ ನಡೆಯಿತು. ಶಾಸಕಿ ಭಾಗಿರಥಿ ಮುರುಳ್ಯ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

kadaba times
uniq

ಸುಳ್ಯ: ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಯಾಗದಂತೆ ತಡೆಯುವ ಮೂಲಕ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ, ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಏಪ್ರಿಲ್ 27ರಂದು ಮಹಿಳಾ ಮೋರ್ಚಾ ವತಿಯಿಂದ ಬೃಹತ್ ‘ಜನಾಕ್ರೋಶ ಸಭೆ’ ಆಯೋಜಿಸಲಾಗಿತ್ತು.

ಕಾಂಗ್ರೆಸ್‌ನದ್ದು ನರಿ ಬುದ್ಧಿ: ಶಾಸಕಿ ಭಾಗಿರಥಿ ಮುರುಳ್ಯ ವಾಗ್ದಾಳಿ

ಸಭೆಯನ್ನುದ್ದೇಶಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಅವರು, “ಕೇಂದ್ರ ಸರ್ಕಾರವು ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದಾಗ ಅದನ್ನು ಎಲ್ಲರೂ ಪಕ್ಷಾತೀತವಾಗಿ ಸ್ವಾಗತಿಸಬೇಕಿತ್ತು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇದನ್ನು ವಿರೋಧಿಸುವ ಮೂಲಕ ತಾವು ಮಹಿಳಾ ಶಕ್ತಿಯ ವಿರೋಧಿಗಳು ಎಂಬುದನ್ನು ಸಾಬೀತುಪಡಿಸಿವೆ,” ಎಂದು ಕಿಡಿಕಾರಿದರು.

kadaba times
kadaba times

ಮುಂದುವರಿದು ಮಾತನಾಡಿದ ಅವರು, “ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಮತ್ತಷ್ಟು ಶಕ್ತಿ ತುಂಬಲು ‘ನಾರಿಶಕ್ತಿ ವಂದನಾ’ ಕಾಯ್ದೆ ತರಲು ಮುಂದಾದಾಗ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಕಾಂಗ್ರೆಸ್‌ನ ಸಹಕಾರ ಇಲ್ಲದೆಯೇ ಮುಂದೊಂದು ದಿನ ಈ ಮಸೂದೆ ಜಾರಿಯಾಗುವುದು ಶತಸಿದ್ಧ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಹಾಗೂ ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Related Articles

Latest Articles