ಏನೆಕಲ್ಲು ಗ್ರಾಮದಲ್ಲಿ ತಡರಾತ್ರಿ ನಾಯಿಯನ್ನು ಹೊತ್ತೊಯ್ದ ಚಿರತೆ

kadaba times

ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಗ್ರಾಮದ ಅರಂಪಾಡಿಯಲ್ಲಿ ಚಿರತೆ ಭೀತಿ. ಈಶ್ವರ ಗೌಡರ ಮನೆಯ ನಾಯಿಯನ್ನು ಹೊತ್ತೊಯ್ದ ಚಿರತೆ. ಸಿಸಿಟಿವಿ ದೃಶ್ಯಾವಳಿ ಲಭ್ಯ. ಅರಣ್ಯ ಇಲಾಖೆಗೆ ಗ್ರಾಮಸ್ಥರ ಆಗ್ರಹ.

kadaba times
uniq

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಗ್ರಾಮದ ಅರಂಪಾಡಿ ಪರಿಸರದಲ್ಲಿ ಚಿರತೆ ಭೀತಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಬುಧವಾರ (ಏಪ್ರಿಲ್ 8) ತಡರಾತ್ರಿ ಮನೆಯಂಗಳದಲ್ಲಿದ್ದ ನಾಯಿಯನ್ನು ಚಿರತೆಯೊಂದು ಹೊತ್ತೊಯ್ದ ಘಟನೆ ನಡೆದಿದೆ.

ಅರಂಪಾಡಿ ನಿವಾಸಿ ಈಶ್ವರ ಗೌಡ ಎಂಬುವರ ಮನೆಯ ಪಡಸಾಲೆಯಲ್ಲಿ ಮಲಗಿದ್ದ ನಾಯಿಯನ್ನು ತಡರಾತ್ರಿ ಬಂದ ಚಿರತೆ ಬಲಿಪಡೆದಿದೆ. ಈ ಭೀಕರ ದೃಶ್ಯವು ಮನೆಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಿ ಮಲಗಿದ್ದ ಜಾಗಕ್ಕೇ ಅತೀ ಸದ್ದಿಲ್ಲದೆ ಬಂದ ಚಿರತೆ, ಕ್ಷಣಾರ್ಧದಲ್ಲಿ ಅದರ ಕುತ್ತಿಗೆ ಹಿಡಿದು ಕಾಡಿನತ್ತ ಎಳೆದೊಯ್ದಿದೆ.

kadaba times
kadaba times

ಈ ಭಾಗದಲ್ಲಿ ಚಿರತೆ ದಾಳಿ ಇದೇ ಮೊದಲೇನಲ್ಲ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಇದೇ ಪರಿಸರದ ಕಿಶೋರ್ ಅರಂಪಾಡಿ ಎಂಬುವರ ಮನೆಯ ನಾಯಿಯನ್ನೂ ಚಿರತೆ ಕೊಂದಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅರಂಪಾಡಿ ವ್ಯಾಪ್ತಿಯು ದಟ್ಟ ಕಾಡಿನಿಂದ ಆವೃತವಾಗಿದ್ದು, ಕಾಡುಪ್ರಾಣಿಗಳ ಸಂಚಾರ ಇಲ್ಲಿ ಸಾಮಾನ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿರತೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿ ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಜನರು ಭಯಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ಬದಿಯಲ್ಲಿ ಪಂಚಾಯತ್ ವತಿಯಿಂದ ಕೂಡಲೇ ಸೋಲಾರ್ ದೀಪಗಳನ್ನು ಅಳವಡಿಸಬೇಕು. ಅರಣ್ಯ ಸಚಿವರು ಹಾಗೂ ಅರಣ್ಯ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಚಿರತೆಯನ್ನು ಸೆರೆಹಿಡಿಯಲು ಬೋನು ಅಳವಡಿಸಬೇಕು ಮತ್ತು ಅದನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ನಿರ್ಧರಿಸಿದ್ದಾರೆ.

Related Articles

Latest Articles