ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ‘ಕಾಂತಾರ’ ಸ್ಟಾರ್ ರಿಷಬ್ ಶೆಟ್ಟಿ| Rishab Shetty at Kukke Subramanya

kadaba times

ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರು ಏಪ್ರಿಲ್ 6ರಂದು ಪತ್ನಿ ಮತ್ತು ತಾಯಿಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು. ದೇವರ ದರ್ಶನ ಪಡೆದು ಮಹಾಪೂಜೆಯಲ್ಲಿ ಪಾಲ್ಗೊಂಡ ರಿಷಬ್ ಅವರ ಇತ್ತೀಚಿನ ಸಿನಿಮಾ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.

kadaba times
uniq

ಸುಬ್ರಹ್ಮಣ್ಯ: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಹಾಗೂ ನಿರ್ದೇಶಕ, ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಅವರು ಸೋಮವಾರ (ಏಪ್ರಿಲ್ 6) ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ರಿಷಬ್ ಶೆಟ್ಟಿ ಅವರ ಜೊತೆಯಲ್ಲಿ ಪತ್ನಿ ಪ್ರಗತಿ ಶೆಟ್ಟಿ, ತಾಯಿ ರತ್ನಾವತಿ ಹಾಗೂ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದರು. ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಅವರು, ಸಾಲುಗಟ್ಟಿನಿಂತು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕ್ಷೇತ್ರದ ಪ್ರಮುಖ ಶಕ್ತಿ ದೇವತೆಯಾದ ಹೊಸಳ್ಳಿಗಮ್ಮ ದೇವಿಯ ಸನ್ನಿಧಿಗೂ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು.

kadaba times
kadaba times

ಮಧ್ಯಾಹ್ನದ ವೇಳೆ ನಡೆದ ಶ್ರೀ ದೇವರ ಮಹಾಪೂಜೆಯಲ್ಲಿ ರಿಷಬ್ ಮತ್ತು ಕುಟುಂಬಸ್ಥರು ಭಕ್ತಿಯಿಂದ ಪಾಲ್ಗೊಂಡರು. ಅರ್ಚಕರು ನೀಡಿದ ಮಂತ್ರಾಕ್ಷತೆ ಹಾಗೂ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದ ಅವರು, ಕ್ಷೇತ್ರದ ಶಾಂತಿ ಮತ್ತು ನೆಮ್ಮದಿಯ ವಾತಾವರಣದಲ್ಲಿ ಕೆಲಕಾಲ ಕಳೆದರು. ದೇವಸ್ಥಾನಕ್ಕೆ ಭೇಟಿ ನೀಡಿದರು.

ರಿಷಬ್ ಶೆಟ್ಟಿ ಕೇವಲ ನಟನಾಗಿ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ಗಮನ ಸೆಳೆದ ಸೃಜನಶೀಲ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.ತುಳುನಾಡಿನ ದೈವಾರಾಧನೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ‘ಕಾಂತಾರ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅತಿ ದೊಡ್ಡ ಯಶಸ್ಸು ಕಂಡಿತ್ತು.

Related Articles

Latest Articles