ಕುಕ್ಕೆ ಸುಬ್ರಹ್ಮಣ್ಯ: ಪ್ಯಾಂಟ್ ಜೇಬಿನಲ್ಲಿದ್ದಾಗಲೇ ಸ್ಫೋಟಗೊಂಡ ಮೊಬೈಲ್

ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ!

kadaba times

ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನಲ್ಲಿ ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಯುವಕನೊಬ್ಬನ ಕಾಲಿಗೆ ಗಂಭೀರ ಗಾಯಗಳಾಗಿವೆ. ಪ್ಯಾಂಟ್ ಕಿಸೆಯಲ್ಲಿದ್ದ ವಿವೋ ಮೊಬೈಲ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದು, ಈ ಆಕಸ್ಮಿಕ ಘಟನೆಯ ಪೂರ್ಣ ವಿವರ ಇಲ್ಲಿದೆ.

kadaba times
uniq

ಸುಬ್ರಹ್ಮಣ್ಯ: ಸ್ಮಾರ್ಟ್‌ಫೋನ್ ಬಳಸುವವರು ಎಚ್ಚರದಿಂದಿರಬೇಕು ಎಂಬುವುದಕ್ಕೆ ಸಾಕ್ಷಿಯಾದ ಭೀಕರ ಘಟನೆಯೊಂದು ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನಲ್ಲಿ ಮಾರ್ಚ್23 ರ ಬೆಳಿಗ್ಗೆ ನಡೆದಿದೆ. ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡ ಪರಿಣಾಮ ಯುವಕನೊಬ್ಬನ ಕಾಲಿಗೆ ಗಂಭೀರ ಗಾಯಗಳಾಗಿವೆ.

ಕಲ್ಮಕಾರಿನ ನಿಡುಬೆ ನಿವಾಸಿ ಗುರುಪ್ರಸಾದ್ ಎಂಬವರು ಈ ಆಕಸ್ಮಿಕ ಘಟನೆಯಲ್ಲಿ ಗಾಯಗೊಂಡವರು. ಇವರು ವಿವೋ ವೈ 100 ಎ (Vivo Y100A) ಮಾದರಿಯ ಮೊಬೈಲ್ ಬಳಸುತ್ತಿದ್ದರು. ಇಂದು ಬೆಳಿಗ್ಗೆ ಮೊಬೈಲ್ ಫೋನನ್ನು ತಮ್ಮ ಪ್ಯಾಂಟ್‌ನ ಕಿಸೆಯಲ್ಲಿ ಇಟ್ಟುಕೊಂಡಿದ್ದಾಗ, ಯಾವುದೇ ಮುನ್ಸೂಚನೆಯಿಲ್ಲದೆ ಮೊಬೈಲ್ ಒಮ್ಮೆಗೇ ಸ್ಫೋಟಗೊಂಡಿದೆ.

kadaba times
kadaba times

ಬಾಂಬ್ ಸ್ಫೋಟದಂತಹ ಶಬ್ದ: ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಬಾಂಬ್ ಸಿಡಿದ ರೀತಿಯಲ್ಲಿ ದೊಡ್ಡ ಶಬ್ದ ಕೇಳಿಬಂದಿದ್ದು, ಸುತ್ತಲೂ ಹೊಗೆ ಆವರಿಸಿದೆ. ಬೆಂಕಿ ಹತ್ತಿಕೊಳ್ಳದಿದ್ದರೂ, ಮೊಬೈಲ್‌ನ ಬ್ಯಾಟರಿ ಭಾಗ ಸಂಪೂರ್ಣ ಕಪ್ಪಾಗಿದ್ದು ಸುಟ್ಟು ಕರಕಲಾಗಿದೆ. ಸ್ಫೋಟದ ರಭಸಕ್ಕೆ ಗುರುಪ್ರಸಾದ್ ಅವರ ಕಾಲಿನ ತೊಡೆಯ ಭಾಗದ ಚರ್ಮ ಬೆಂದು ಹೋಗಿದ್ದು, ಗಂಭೀರ ಗಾಯಗಳಾಗಿವೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಬಳಕೆದಾರರಿಗೆ ಎಚ್ಚರಿಕೆ: ಈ ಘಟನೆಯು ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಆತಂಕ  ಹುಟ್ಟಿಸಿದೆ. ಬ್ಯಾಟರಿ ಅತಿಯಾಗಿ ಬಿಸಿಯಾಗುವುದು, ಗುಣಮಟ್ಟವಿಲ್ಲದ ಚಾರ್ಜರ್ ಬಳಸುವುದು ಅಥವಾ ತಾಂತ್ರಿಕ ದೋಷಗಳಿಂದ ಇಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಸ್ಮಾರ್ಟ್‌ಫೋನ್ ಬಳಸುವಾಗ ಅಥವಾ ಜೇಬಿನಲ್ಲಿ ಇಟ್ಟುಕೊಳ್ಳುವಾಗ ಅತಿಯಾದ ಉಷ್ಣತೆ ಕಂಡುಬಂದರೆ ತಕ್ಷಣವೇ ಅದನ್ನು ದೂರ ಇಡುವಂತೆ ಇಡುವುದು ಸೂಕ್ತವಾಗಿದೆ.

Related Articles

Latest Articles