Sanjo Sunil’s Death in Ireland-ಸಾಂಜೋ ಸುನೀಲ್ ಸಾವು ಆಕಸ್ಮಿಕವೇ ಅಥವಾ ವ್ಯವಸ್ಥಿತ ಸಂಚೇ?

kadaba times

ಕಡಬ: ಉದ್ಯೋಗ ನಿಮಿತ್ತ ಐರ್ಲೆಂಡ್‌ಗೆ ತೆರಳಿದ್ದ ಕಡಬ ತಾಲ್ಲೂಕಿನ ಕುಟ್ರುಪ್ಪಾಡಿ ನಿವಾಸಿ ಸಾಂಜೋ ಸುನೀಲ್ ಅವರ ಸಾವು ಹಲವು ಅನುಮಾನಗಳಿಗೆ ಡೆಮಾಡಿಕೊಟ್ಟಿದೆ. ಈ ಸಾವಿನ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ ಎಂದು ಆರೋಪಿಸಿರುವ ಕಡಬ ಕ್ರಿಶ್ಚಿಯನ್ ಲೈಟ್ನಿಂಗ್ ಮತ್ತು ಮಲಯಾಳಿ ಫ್ರೆಂಡ್ಸ್, ಸಮಗ್ರ ತನಿಖೆಗೆ ಆಗ್ರಹಿಸಿ ಇಂದು (ಮಾರ್ಚ್ 15, ಭಾನುವಾರ) ಸಂಜೆ ಕಡಬದಲ್ಲಿ ಬೃಹತ್ ಮೇಣದ ಬತ್ತಿ ಮೌನ ಮೆರವಣಿಗೆ ಹಮ್ಮಿಕೊಂಡಿದೆ.

kadaba times
uniq

ಶನಿವಾರ ಕಡಬ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ಕ್ಸೇವಿಯರ್ ಬೇಬಿ,  ಸಾಂಜೋ ಸುನೀಲ್ ಅವರು ವಿವಾಹವಾದ ಕೇವಲ ಒಂದು ತಿಂಗಳಲ್ಲಿ ಇಸ್ರೇಲ್‌ಗೆ ಉದ್ಯೋಗಕ್ಕೆ ತೆರಳಿದ್ದರು. ಅವರ ಪತ್ನಿ   ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿಯ ಜೊತೆಗಿರಲೆಂದು ಡಿಪೆಂಡೆಂಟ್ ವೀಸಾದಲ್ಲಿ ಐರ್ಲೆಂಡ್‌ಗೆ ಹೋದ ಕೇವಲ 28 ದಿನಗಳಲ್ಲಿ ಸಾಂಜೋ ಅವರ ಮೃತದೇಹ ಸಂಶಯಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸುಮಾರು 6 ಅಡಿ ಎತ್ತರದ ಸಾಂಜೋ ಅವರು, ಕೇವಲ 5 ಅಡಿ ಎತ್ತರದ ಬಾತ್ ರೂಮ್ ರೇಡಿಯೇಟರ್ ಕೇಬಲ್‌ಗೆ ನೇಣು ಹಾಕಿಕೊಂಡಿದ್ದಾರೆ ಎನ್ನುವುದು ನಂಬಲಸಾಧ್ಯ. ಮೃತದೇಹವು ಮೊಣಕಾಲೂರಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕೊಲೆಯ ಶಂಕೆಯನ್ನು ಬಲಪಡಿಸಿದೆ. ಘಟನೆ ನಡೆದ ಸಮಯದಲ್ಲಿ   ಫ್ಲಾಟ್‌ಗೆ ಕೇರಳ ಮೂಲದ ವ್ಯಕ್ತಿಯೊಬ್ಬರು ಬಂದು ಹೋಗಿರುವ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿದೆ ಎನ್ನಲಾಗಿದೆ.

kadaba times
kadaba times

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಐರ್ಲೆಂಡ್‌ನಿಂದ ಮರಣೋತ್ತರ ಪರೀಕ್ಷೆಯ ವರದಿಯನ್ನು ತರಿಸಿಕೊಂಡು ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು” ಎಂದು ಕ್ಸೇವಿಯರ್ ಬೇಬಿ ಒತ್ತಾಯಿಸಿದರು.

ಇಂದಿನ ಪ್ರತಿಭಟನೆ: ಇಂದು ಸಂಜೆ ಕಡಬದ ಅನುಗ್ರಹ ಸಭಾಭವನದಿಂದ ಸೈಂಟ್ ಜೋಕಿಮ್ಸ್ ವಾಣಿಜ್ಯ ಕಟ್ಟಡದವರೆಗೆ ಮೌನ ಮೆರವಣಿಗೆ ನಡೆಯಲಿದೆ. ಈ ಹೋರಾಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಂಜೋ ಸುನೀಲ್ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮನೋಜ್, ಶ್ಯಾಂಡೋ ಕೆ.ಡಿ., ಸಜಿ ಕೆ. ಜಾನ್, ಮತ್ತು ಬಿನೊಯ್ ಮ್ಯಾಥ್ಯೂ ಉಪಸ್ಥಿತರಿದ್ದರು.

Related Articles

Latest Articles