ಸವಣೂರು: ಸಾಲದ ಹಣ ವಾಪಾಸ್ ಕೇಳಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ :ಇಬ್ಬರ ವಿರುದ್ದ FIR ದಾಖಲು

kadaba times

ದಕ್ಷಿಣ ಕನ್ನಡದ ಸವಣೂರು ಪೇಟೆಯಲ್ಲಿ ಹಳೆ ಸಾಲದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮೋನಪ್ಪ ಗೌಡ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಇಬ್ಬರು ವ್ಯಕ್ತಿಗಳ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

kadaba times
uniq

ಸವಣೂರು: ಹಳೆಯ ಸಾಲದ ಹಣವನ್ನು ಹಿಂತಿರುಗಿಸುವಂತೆ ಕೇಳಿದ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಸವಣೂರು ಪೇಟೆಯಲ್ಲಿ ನಡೆದಿದ್ದು, ಇಬ್ಬರು ವ್ಯಕ್ತಿಗಳ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುದ್ಮಾರು ನಿವಾಸಿ ಮೋನಪ್ಪ ಗೌಡ (32) ಎಂಬವರು ಮೊಟ್ಟೆ ಲೈನ್ ಸೇಲ್ ವ್ಯಾಪಾರ ಮಾಡುತ್ತಿದ್ದು, ಪರಿಚಯದ ಮೋಕ್ಷಿತ್ ಇಡ್ಯಾಡಿ ಎಂಬವರು ಸುಮಾರು ಒಂದು ವರ್ಷದ ಹಿಂದೆ ಅವರಿಂದ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ಈ ಹಣವನ್ನು ವಾಪಾಸ್ ನೀಡುವಂತೆ ಕೇಳಿದರೂ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ ಎನ್ನಲಾಗಿದೆ.

ದಿನಾಂಕ 07.03.2026 ರಂದು ಸಂಜೆ ಮೋನಪ್ಪ ಗೌಡ ಅವರು ವ್ಯಾಪಾರದ ನಿಮಿತ್ತ ಸವಣೂರು ಪೇಟೆಗೆ ಹೋಗಿದ್ದಾಗ, ಅಲ್ಲಿರುವ ಬೇಕರಿಯೊಂದರಲ್ಲಿ ಮೋಕ್ಷಿತ್ ಅವರನ್ನು ಕಂಡು ಹಣದ ಬಗ್ಗೆ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

kadaba times
kadaba times

ಹಲ್ಲೆ  ಆರೋಪ: ಮೋನಪ್ಪ ಗೌಡ ಅವರು ತಮ್ಮ ವಾಹನದ ಬಳಿ ತೆರಳುತ್ತಿದ್ದಾಗ, ಮೋಕ್ಷಿತ್ ಮತ್ತು ಆತನ ತಮ್ಮ ರಂಜಿತ್ ಎಂಬವರು ಮರದ ದೊಣ್ಣೆಯಿಂದ ಮೋನಪ್ಪ ಅವರ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಸಂದರ್ಭದಲ್ಲಿ ಮೋನಪ್ಪ ಅವರ ಅಣ್ಣ ನಾರಾಯಣ ಗೌಡ ಅವರು ತಡೆಯಲು ಬಂದಾಗ ಅವರನ್ನೂ ಎಳೆದಾಡಿ ಹಲ್ಲೆ ನಡೆಸಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸುತ್ತಿರುವುದನ್ನು ಕಂಡು ಆರೋಪಿಗಳು ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮೋನಪ್ಪ ಗೌಡ ಅವರು ನೀಡಿದ ದೂರಿನ ಆಧಾರದ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 20/2026 ರಂತೆ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS-2023) ಯ ವಿವಿಧ ಕಲಂಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Latest Articles