ಸುಬ್ರಹ್ಮಣ್ಯ: ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು – ಪ್ರಕರಣ ದಾಖಲು

kadaba times

ಸುಬ್ರಹ್ಮಣ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಪಾರ್ಕಿಂಗ್ ಮಾಡಲಾಗಿದ್ದ ಪ್ರಮೀಳಾ ಕುಮಾರಿ ಎಂಬುವವರ ಮ್ಯಾಸ್ಟ್ರೋ ಸ್ಕೂಟಿ ಕಳುವಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

kadaba times
uniq

ಸುಬ್ರಹ್ಮಣ್ಯ: ಕೆಲಸಕ್ಕೆಂದು ತೆರಳಲು ಬಸ್ ನಿಲ್ದಾಣದ ಎದುರು ಪಾರ್ಕಿಂಗ್ ಮಾಡಲಾಗಿದ್ದ ದ್ವಿಚಕ್ರ ವಾಹನವೊಂದು ಕಳುವಾಗಿರುವ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದೆ.

ಸುಬ್ರಹ್ಮಣ್ಯದ ನಿವಾಸಿಯಾದ ಪ್ರಮೀಳಾ ಕುಮಾರಿ ಬಿ.ವಿ  ಅವರು ಸುಳ್ಯದ  ಖಾಸಗಿ  ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ. ಇವರು ಪ್ರತಿದಿನ ತಮ್ಮ ಮ್ಯಾಸ್ಟ್ರೋ ಸ್ಕೂಟಿ (ನೋಂದಣಿ ಸಂಖ್ಯೆ: KA 21 U 3638) ಮೂಲಕ ಸುಬ್ರಹ್ಮಣ್ಯ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿ ವಾಹನ ನಿಲ್ಲಿಸಿ ನಂತರ ಬಸ್ಸಿನಲ್ಲಿ ಸುಳ್ಯಕ್ಕೆ ಕೆಲಸಕ್ಕೆ ತೆರಳುತ್ತಿದ್ದರು.

kadaba times
kadaba times

ಮಾರ್ಚ್ 7   ರಂದು ಬೆಳಿಗ್ಗೆ 7:00 ಗಂಟೆಗೆ ಎಂದಿನಂತೆ ಬಸ್ ನಿಲ್ದಾಣದ ಎದುರು ರಸ್ತೆ ಬದಿಯಲ್ಲಿ ಸ್ಕೂಟಿಯನ್ನು ಪಾರ್ಕಿಂಗ್ ಮಾಡಿ ಸುಳ್ಯಕ್ಕೆ ಹೋಗಿದ್ದರು. ಸಂಜೆ 7:00 ಗಂಟೆಗೆ ಕೆಲಸ ಮುಗಿಸಿ ವಾಪಸ್ ಬಂದಾಗ ನಿಲ್ಲಿಸಿದ್ದ ಜಾಗದಲ್ಲಿ ಸ್ಕೂಟಿ ಇರಲಿಲ್ಲ. ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ವಾಹನ ಪತ್ತೆಯಾಗಿಲ್ಲ.

ಕಳುವಾದ ಸ್ಕೂಟಿಯ ಅಂದಾಜು ಮೌಲ್ಯ 25,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪ್ರಮೀಳಾ ಕುಮಾರಿ ಅವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2026, ಕಲಂ: 303(2) BNS-2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರು ಈ ನೋಂದಣಿ ಸಂಖ್ಯೆಯ ವಾಹನ ಕಂಡುಬಂದಲ್ಲಿ ಅಥವಾ ಮಾಹಿತಿ ಲಭ್ಯವಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Related Articles

Latest Articles