ಕಡಬ: ವಿಶೇಷ ಚೇತನ ಮಕ್ಕಳ ಫಿಸಿಯೋಥೆರಪಿ ಕೇಂದ್ರಕ್ಕೆ ಟೇಬಲ್ ಹಸ್ತಾಂತರಿಸಿದ ಪಟ್ಟಣ ಪಂಚಾಯತ್

kadaba times

ಕಡಬ: ವಿಶೇಷ ಅಗತ್ಯವಿರುವ ಮತ್ತು ದೈಹಿಕ ನ್ಯೂನತೆ ಹೊಂದಿರುವ ಮಕ್ಕಳ ದೈನಂದಿನ ಚಿಕಿತ್ಸೆ ಹಾಗೂ ಸುಧಾರಣೆಗೆ ಪೂರಕವಾಗುವ ನಿಟ್ಟಿನಲ್ಲಿ, ಕಡಬ ಪಟ್ಟಣ ಪಂಚಾಯತ್ ವತಿಯಿಂದ ಮಹತ್ವದ ಹೆಜ್ಜೆಯನ್ನಿಡಲಾಗಿದೆ.

kadaba times
uniq

ಪಟ್ಟಣದ ವಿಶೇಷ ಚೇತನ ಮಕ್ಕಳ ಫಿಸಿಯೋಥೆರಪಿ ಕೇಂದ್ರಕ್ಕೆ ಸುಸಜ್ಜಿತ ಅಡ್ಜೆಸ್ಟೇಬಲ್ ಟೇಬಲ್ (Adjustable Table) ಅನ್ನು ಬುಧವಾರ (ಫೆಬ್ರವರಿ 25) ಹಸ್ತಾಂತರಿಸಲಾಯಿತು.

ಕಡಬ ಪಟ್ಟಣ ಪಂಚಾಯತ್‌ನ ಅಧ್ಯಕ್ಷೆ  ಶ್ರೀಮತಿ ತಮನ್ನಾ ಜಬೀನ್ ಅವರು ಅಧಿಕೃತವಾಗಿ ಈ ಉಪಕರಣವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿಶೇಷ ಚೇತನ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಫಿಸಿಯೋಥೆರಪಿ ದೊರೆತರೆ ಅವರ ಜೀವನ ಮಟ್ಟ ಸುಧಾರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯತ್ ಸದಾ ಇಂತಹ ಮಾನವೀಯ ಕಾರ್ಯಗಳಿಗೆ ಸ್ಪಂದಿಸಲಿದೆ,” ಎಂದು ತಿಳಿಸಿದರು.

kadaba times
kadaba times

ಸಮರ್ಪಕ ಉಪಕರಣ ಲಭ್ಯವಾಗಿರುವುದರಿಂದ ಇನ್ನು ಮುಂದೆ ಮಕ್ಕಳಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಸುಲಭವಾಗಲಿದೆ ಎಂದು ಕೇಂದ್ರದ ನಿರ್ವಾಹಕಿ  ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್‌ನ  ವಾರ್ಡ್‌ಗಳ ಸದಸ್ಯರು ಭಾಗವಹಿಸಿ ಬೆಂಬಲ ಸೂಚಿಸಿದರು. ಶ್ರೀಮತಿ ಶೀತಮ್ಮ ಕೆ.ಎಸ್. (BIERT, BRC),ಶ್ರೀಮತಿ ತನುಜಾ (BCERT, BRC ಪುತ್ತೂರು), ಗಣೇಶ್ ನಡುವಾಲ್ (CRP), ಅನಂತ ಅಜಿಲ (ಮುಖ್ಯೋಪಾಧ್ಯಾಯರು, ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಡಬ), ಪಟ್ಟಣ ಪಂಚಾಯತ್‌ನ ಸಿಬ್ಬಂದಿ ವರ್ಗದವರು ಹಾಗೂ ಕೇಂದ್ರದ ಫಲಾನುಭವಿಗಳು ಉಪಸ್ಥಿತರಿದ್ದರು.

Related Articles

Latest Articles