ಕಡಬದಲ್ಲಿ 65ನೇ ವರ್ಷದ ‘ಏಕಾಹ ಭಜನಾ ಮಹೋತ್ಸವಕ್ಕೆ ಡೇಟ್ ಫಿಕ್ಸ್

kadaba times

ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಏಪ್ರಿಲ್ 3ರಂದು 65ನೇ ವರ್ಷದ ಏಕಾಹ ಭಜನಾ ಮಹೋತ್ಸವ ಜರುಗಲಿದೆ. ಅಹೋರಾತ್ರಿ ನಡೆಯಲಿರುವ ಈ ಭಜನಾ ಸಂಭ್ರಮದ ಸಂಪೂರ್ಣ ವಿವರ ಇಲ್ಲಿದೆ.ಕಡಬ:  ಇಲ್ಲಿನ  ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 65ನೇ ವರ್ಷದ  ಕಡಬ ಏಕಾಹ ಭಜನಾ ಮಹೋತ್ಸವವು ಏಪ್ರಿಲ್ 3 ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ.

kadaba times
uniq

ಏಪ್ರಿಲ್ 3, ಶುಕ್ರವಾರ ಬೆಳಿಗ್ಗೆ 6:26 ರಿಂದ ಭಜನಾ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಏಪ್ರಿಲ್ 4, ಶನಿವಾರ ಸೂರ್ಯೋದಯದವರೆಗೆ ಅಹೋರಾತ್ರಿ ನಿರಂತರವಾಗಿ ನಡೆಯಲಿದೆ.  65 ವರ್ಷಗಳ ಸುದೀರ್ಘ ಇತಿಹಾಸವಿರುವ  ಈ ಭಜನಾ ಮಹೋತ್ಸವವು ಭಕ್ತಾದಿಗಳ ಪಾಲಿಗೆ ವಿಶೇಷ ಆಧ್ಯಾತ್ಮಿಕ ಕೇಂದ್ರಬಿಂದುವಾಗಿದೆ.

ಕಾರ್ಯಕ್ರಮದ ದಿನದಂದು ಭಕ್ತಾದಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

kadaba times
kadaba times

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ  ಚಂದ್ರಶೇಖರ ಕರ್ಕೇರ, ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆಡಿಲಾಯ, ಭಜನಾ ಮಂಡಳಿಯ ಅಧ್ಯಕ್ಷ  ಕೆ. ಸೋಮಪ್ಪ ನಾಯಕ್, ಏಕಾಹ ಭಜನಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ   ಜಂಬುರಾಜ್ ಮಹಾಜನ್, ಅಧ್ಯಕ್ಷ  ದಯಾನಂದ ಆರಿಗ ಹಾಗೂ ಕಾರ್ಯದರ್ಶಿ  ಜಯಂತ ಕುತ್ಯಾಡಿ ಸಂಕೇಶ ಮತ್ತು ಸಮಸ್ತ ಭಜಕ ವೃಂದದವರು ಈ ಪುಣ್ಯ ಕಾರ್ಯಕ್ರಮಕ್ಕೆ ಭಕ್ತಾದಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

Related Articles

Latest Articles