ಕಾಣಿಯೂರು: ಬೈಕ್ ಮತ್ತು ಪಿಕಪ್ ನಡುವೆ ಡಿಕ್ಕಿ; ಸವಾರನಿಗೆ ಗಾಯ, FIR ದಾಖಲು

kadaba times

ಕಾಣಿಯೂರು ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಬೈಕ್ ಮತ್ತು ಪಿಕಪ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಂದೀಪ್ ಎ. ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

kadaba times
uniq

ಕಾಣಿಯೂರು: ಇಲ್ಲಿನ ಪಾಲೆತ್ತಡ್ಕ ಎಂಬಲ್ಲಿ ಬೈಕ್ ಮತ್ತು ಪಿಕಪ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ: ಕಾಣಿಯೂರು ಗ್ರಾಮದ ಸಂದೀಪ್ ಎ. ಎಂಬವರು ಪುಣ್ಚತ್ತಾರು ಪೇಟೆಗೆ ಬಂದು, ಅಲ್ಲಿಂದ ಪುಣ್ಚತ್ತಾರು-ಕಾಣಿಯೂರು ಮಾರ್ಗವಾಗಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾಣಿಯೂರು ಕಡೆಯಿಂದ ಪುಣ್ಚತ್ತಾರು ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನವು ಪಾಲೆತ್ತಡ್ಕ ಎಂಬಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.

kadaba times
kadaba times

ಡಿಕ್ಕಿಯ ರಭಸಕ್ಕೆ ಸವಾರ ಸಂದೀಪ್ ರಸ್ತೆ ಬದಿಯ ಕಚ್ಚಾ ಮಣ್ಣಿನ ರಸ್ತೆಗೆ ಬಿದ್ದಿದ್ದಾರೆ.ಅಪಘಾತದಲ್ಲಿ ಸವಾರನ ಬಲಗಾಲಿಗೆ ರಕ್ತಗಾಯ ಹಾಗೂ ಗುದ್ದಿದ ಗಾಯಗಳಾಗಿವೆ.ಡಿಕ್ಕಿಯ ಪರಿಣಾಮ ಎರಡೂ ವಾಹನಗಳು ಭಾಗಶಃ ಜಖಂಗೊಂಡಿವೆ.

ಸದ್ಯ ಈ ಅಪಘಾತದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Latest Articles