ಪೆರಾಬೆಯಲ್ಲಿ ಅಡಿಕೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಕೂಲಿ ಕಾರ್ಮಿಕರ ವಿಶೇಷ ಕಾವಲು ತಂಡ!

kadaba times

ಕಡಬ ತಾಲೂಕಿನ ಪೆರಾಬೆ ಗ್ರಾಮದ ಆಗತ್ತಾಡಿಯಲ್ಲಿ ಕಳೆದ ಒಂದು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಅಡಿಕೆ ಕಳ್ಳನನ್ನು ರೈತರ ತಂಡವೇ ಕಾರ್ಯಾಚರಣೆ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಡೆದಿದೆಕಡಬ: ರೈತರು ಹಗಲಿರುಳು ಕಷ್ಟಪಟ್ಟು ಬೆಳೆಸಿದ ಫಸಲನ್ನು ರಾತ್ರೋರಾತ್ರಿ ಲೂಟಿ ಮಾಡುವ ಕಳ್ಳರಿಗೆ ಇಲ್ಲೊಬ್ಬ ರೈತರು ವಿಭಿನ್ನವಾಗಿ ಪಾಠ ಕಲಿಸಿದ್ದಾರೆ. ಕಡಬ ತಾಲೂಕಿನ ಪೆರಾಬೆ ಗ್ರಾಮದ ಆಗತ್ತಾಡಿ ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ರೈತರ ತೋಟಕ್ಕೆ ಕನ್ನ ಹಾಕುತ್ತಿದ್ದ ಅಡಿಕೆ ಕಳ್ಳನನ್ನು ರೈತರೇ ಸಾಹಸ ಸಿಂಹರಂತೆ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.

kadaba times
uniq

ಏನಿದು ಘಟನೆ? ಆಗತ್ತಾಡಿ ನಿವಾಸಿಗಳಾದ ಕೃಷ್ಣ ಕುಮಾರ್ ಭಟ್ ಹಾಗೂ ಮೋನಪ್ಪ ಗೌಡ ಎಂಬುವವರ ತೋಟದಲ್ಲಿ ಕಳೆದ ಒಂದು ತಿಂಗಳಿನಿಂದ ಅಡಿಕೆ ಕಳ್ಳತನವಾಗುತ್ತಿತ್ತು. ಕಳ್ಳರು ಹಗಲು-ರಾತ್ರಿ ಎನ್ನದೆ ಅಡಿಕೆ ಮರ ಏರಿ ಫಸಲು ಕದಿಯುತ್ತಿದ್ದರು. ಇದರಿಂದ ಕಂಗಾಲಾಗಿದ್ದ ಕೃಷ್ಣ ಕುಮಾರ್ ಭಟ್ ಅವರು ಕಳ್ಳನನ್ನು ಹೇಗಾದರೂ ಮಾಡಿ ಹಿಡಿಯಲೇಬೇಕೆಂದು ಪಣ ತೊಟ್ಟು, ಕೂಲಿ ಕಾರ್ಮಿಕರ ವಿಶೇಷ ಕಾವಲು ತಂಡವನ್ನು ರಚಿಸಿದ್ದರು.

ಕಾರ್ಯಾಚರಣೆ ಯಶಸ್ವಿ: ಫೆಬ್ರವರಿ 18ರಂದು ಮಧ್ಯಾಹ್ನ ತೋಟಕ್ಕೆ ಅಡಿಕೆ ಕಡಿಯಲು ಬಂದ ಕಳ್ಳನನ್ನು ಈ ವಿಶೇಷ ತಂಡ ಸುತ್ತುವರಿದು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಬಳಿಕ ನಡೆದ ವಿಚಾರಣೆಯಲ್ಲಿ ಈತ ಸ್ಥಳೀಯ ನಿವಾಸಿಯೇ ಎಂದು ತಿಳಿದು ಬಂದಿದೆ.  ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ತಕ್ಷಣ ಪೊಲೀಸರಿಗೆ ದೂರು ನೀಡುವುದು ರೂಢಿ. ಆದರೆ, ಇಲ್ಲಿನ ಕೃಷಿಕ ಕೃಷ್ಣ ಕುಮಾರ್ ಭಟ್ ಅವರು ಕಳ್ಳನಿಗೆ ಮಾನವೀಯ ನೆಲೆಗಟ್ಟಿನಲ್ಲಿ ಬುದ್ಧಿ ಹೇಳಿ, ಎಚ್ಚರಿಕೆ ನೀಡಿ ಕಳುಹಿಸುವ ಮೂಲಕ ಸಮಾಜಕ್ಕೆ ವಿಭಿನ್ನ ಸಂದೇಶ ನೀಡಿದ್ದಾರೆ.

kadaba times
kadaba times

ಇತ್ತೀಚೆಗಷ್ಟೇ ಸಮೀಪದ ಆಲಂಕಾರಿನಲ್ಲಿ ಅಡಿಕೆ ಕದಿಯಲು ಹೋದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿ ಜೈಲುಪಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆಲಂಕಾರು ಘಟನೆಯು ಕಳ್ಳರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದರೆ, ಪೆರಾಬೆಯ ಈ ಘಟನೆಯು ಕಳ್ಳತನ ಮಾಡುವವರಿಗೆ ರೈತರಿಂದಲೇ ಸಿಕ್ಕ ನೇರ ಎಚ್ಚರಿಕೆಯಾಗಿದೆ

Related Articles

Latest Articles