ಆಲಂಕಾರು: ಔಷಧಿ ತರಲು ಹೋಗಿದ್ದ ಮಹಿಳೆ ಕುಮಾರಧಾರ ನದಿಗೆ ಬಿದ್ದು ಸಾವು

kadaba times

ಕಡಬ ತಾಲೂಕು ಆಲಂಕಾರು ಗ್ರಾಮದ ನಗ್ರಿ ನಿವಾಸಿ ಕೊರಪ್ಪೋಳು (65ವ) ಶಾಂತಿಮೊಗರು ಕುಮಾರಧಾರ ನದಿಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

kadaba times
uniq

ಆಲಂಕಾರು: ಔಷಧ ತರಲೆಂದು ಪೇಟೆಗೆ ಹೋಗಿದ್ದ ವೃದ್ಧೆಯೊಬ್ಬರು ಮನೆಗೆ ಹಿಂದಿರುಗುವ ವೇಳೆ ಆಕಸ್ಮಿಕವಾಗಿ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ  ಆಲಂಕಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಆಲಂಕಾರು ಗ್ರಾಮದ ನಗ್ರಿ ನಿವಾಸಿ ಬೆಳ್ತ ಎಂಬವರ ಪತ್ನಿ ಕೊರಪ್ಪೋಳು (65 ವರ್ಷ) ಮೃತಪಟ್ಟ ದುರ್ದೈವಿ.

ಮೃತ ಕೊರಪ್ಪೋಳು ಅವರು ಶನಿವಾರ ಬೆಳಿಗ್ಗೆ ಆತೂರಿಗೆ ಔಷಧಿ ತರಲೆಂದು ತೆರಳಿದ್ದರು. ಆತೂರಿನಿಂದ ಆಲಂಕಾರಿನವರೆಗೆ ಬಸ್ಸಿನಲ್ಲಿ ಬಂದ ಅವರು, ಬಳಿಕ ಶಾಂತಿಮೊಗರು ಕುಮಾರಧಾರ ನದಿ ತಟದ ಮೂಲಕ ನಡೆದುಕೊಂಡು ನಗ್ರಿಯಲ್ಲಿರುವ ತಮ್ಮ ಮನೆಗೆ ಸಾಗುತ್ತಿದ್ದರು. ಈ ವೇಳೆ ಶಾಂತಿಮೊಗರು ಕಿಂಡಿ ಅಣೆಕಟ್ಟಿನ ಕಡಿದಾದ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

kadaba times
kadaba times

ಶನಿವಾರ ಸಂಜೆ ವೇಳೆ ನದಿಯಲ್ಲಿ ಬೋಟಿಂಗ್‌ಗೆ ಬಂದಿದ್ದ ಇಬ್ಬರು ಯುವಕರು ನದಿಯ ಗಿಡಗಂಟಿಗಳ ಮಧ್ಯೆ ಮಹಿಳೆಯ ಶವ ಸಿಕ್ಕಿಕೊಂಡಿರುವುದನ್ನು ಗಮನಿಸಿ ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಬಂದು ಪರಿಶೀಲಿಸಿದಾಗ ಅಣೆಕಟ್ಟಿನ ಬಳಿ ಮೃತರು ಬೆಳಿಗ್ಗೆ ಖರೀದಿಸಿದ ಔಷಧಿಗಳು, ಆಧಾರ್ ಕಾರ್ಡ್ ಹಾಗೂ ಆತೂರಿನಿಂದ ಆಲಂಕಾರಿಗೆ ಪ್ರಯಾಣಿಸಿದ ಬಸ್ ಟಿಕೆಟ್ ಪತ್ತೆಯಾಗಿದೆ.ಆಧಾರ್ ಕಾರ್ಡ್‌ನಲ್ಲಿದ್ದ ವಿಳಾಸದ ಆಧಾರದ ಮೇಲೆ ಮೃತರ ಕುಟುಂಬದವರನ್ನು ಸಂಪರ್ಕಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಕಡಬ ಪೊಲೀಸರು ಮೃತರ ಪುತ್ರ ಭಾಸ್ಕರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಶವವನ್ನು ನದಿಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಕಡಬಕ್ಕೆ ರವಾನಿಸಲಾಗಿದೆ.

Related Articles

Latest Articles