ಒಬ್ಬಂಟಿ ಮಹಿಳೆಯ ಮನೆಯಲ್ಲಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

kadaba times

ಒಬ್ಬಂಟಿ ಮಹಿಳೆಯ ಮನೆಯಲ್ಲಿದ್ದ  ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

kadaba times
uniq

ಪುತ್ತೂರು: ನಗರದ ಮಂಜಲ್ಪಡ್ಪು ಆಸುಪಾಸಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಒಬ್ಬಂಟಿ ಮಹಿಳೆಯ ಮನೆಯಲ್ಲಿದ್ದ  ವ್ಯಕ್ತಿಯೊಬ್ಬನನ್ನು ಪೊಲೀಸರು ಠಾಣೆಗೆ ಕರೆದೊಯ್ದ ಘಟನೆ ವರದಿಯಾಗಿದೆ.

ಪುತ್ತೂರು ನಗರದ ಮಂಜಲ್ಪಡ್ಪು ವ್ಯಾಪ್ತಿಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಮಹಿಳೆಯೊಬ್ಬರ ಮನೆಗೆ ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ಆಗಮಿಸಿದ್ದರು. ಈ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಹಾಗೂ ಪರಿಸರದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು, ಮನೆಯಲ್ಲಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿ ಠಾಣೆಗೆ ಕರೆದೊಯ್ದಿದ್ದಾರೆ.ಘಟನೆ ನಡೆದ ಮನೆಯ ಅಂಗಳದಲ್ಲಿದ್ದ ಸ್ಕೂಟರ್ ಅನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

kadaba times
kadaba times

ವಿಚಾರಣೆಗೊಳಗಾದ ವ್ಯಕ್ತಿ ಮೂಲತಃ ಶಿವಮೊಗ್ಗದವನೆಂದು ಗುರುತಿಸಲಾಗಿದ್ದು, ಆತ ಇಲ್ಲಿಗೆ ಬರಲು ಕಾರಣವೇನು ಮತ್ತು ಆ ಮಹಿಳೆಗೂ ಆತನಿಗೂ ಇರುವ ಸಂಬಂಧವೇನು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಈ ಘಟನೆಯಿಂದಾಗಿ ಮಂಜಲ್ಪಡ್ಪು ಪರಿಸರದಲ್ಲಿ ಕೆಲಕಾಲ ಕುತೂಹಲ ಹಾಗೂ ಚರ್ಚೆಗಳು ನಡೆದವು. ಸದ್ಯದ ಮಾಹಿತಿ ಪ್ರಕಾರ ಪೊಲೀಸರು ವ್ಯಕ್ತಿಯ ಹಿನ್ನೆಲೆ ಮತ್ತು ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

Related Articles

Latest Articles