ಕಡಬ ಪೇಟೆಯಲ್ಲಿ ಬೈಕ್ ಡಿಕ್ಕಿಯಾಗಿ ಸ್ಕೂಟರ್ ಸವಾರೆಗೆ ಗಂಭೀರ ಗಾಯ :ಪ್ರಕರಣ ದಾಖಲು | Kadaba Road Accident

kadaba times

ಕಡಬದ ಮಾಡದ ಬಳಿ ಮೋಟಾರ್ ಸೈಕಲ್ ಡಿಕ್ಕಿಯಾಗಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಪುಷ್ಪಾವತಿ ಎಂಬವರು ಗಾಯಗೊಂಡಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ: ಅಜಾಗರೂಕತೆಯಿಂದ ಬಂದ ಮೋಟಾರ್ ಸೈಕಲ್ ಸವಾರನೋರ್ವ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಡಬದ   ಮಾಡ ಬಳಿ  ಸಂಭವಿಸಿದೆ.

ಕಡಬ ಗ್ರಾಮದ ನಿವಾಸಿ ಪುಷ್ಪಾವತಿ ಎಂಬವರು ದಿನಾಂಕ 20-01-2026ರಂದು ಬೆಳಿಗ್ಗೆ ಸುಮಾರು 09:30 ಗಂಟೆಗೆ ತಮ್ಮ ಸ್ಕೂಟರ್ ನಲ್ಲಿ ನೆರೆಮನೆಯ ಸಂಗೀತ ಎಂಬವರನ್ನು ಮಾಡದ ಬಳಿ ಇಳಿಸಿ, ಹಾಲಿನ ಸೊಸೈಟಿಗೆ ಹೋಗಲು ರಸ್ತೆ ದಾಟುತ್ತಿದ್ದರು.

ಈ ವೇಳೆ ಕಡಬ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಮೋಟಾರ್ ಸೈಕಲ್ ಸವಾರನು ರಸ್ತೆಯ ತೀರಾ ಬಲಬದಿಗೆ ಬಂದು ಪುಷ್ಪಾವತಿ ಅವರ ಸ್ಕೂಟರ್‌ಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ.  ಡಿಕ್ಕಿಯ ರಭಸಕ್ಕೆ ಪುಷ್ಪಾವತಿ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಅವರ ಬಲಗೈ, ಸೊಂಟ, ಎಡಕಣ್ಣಿನ ಭಾಗ ಹಾಗೂ ಕಾಲುಗಳಿಗೆ ರಕ್ತಗಾಯಗಳಾಗಿವೆ.

kadaba times
kadaba times

ಕೂಡಲೇ ಸ್ಥಳೀಯರು ಮತ್ತು ಪಿರ್ಯಾದಿದಾರರಾದ ಸಂಗೀತ ಅವರು ಸೇರಿ ಗಾಯಾಳುವನ್ನು ಕಡಬದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆ ಹಾಗೂ ನಂತರ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್ ಪ್ರಕರಣ ದಾಖಲು: ಈ ಕುರಿತು   ಕಡಬ ಪೊಲೀಸ್ ಠಾಣೆಯಲ್ಲಿ ಮೋಟಾರ್ ಸೈಕಲ್ ಸವಾರನ ವಿರುದ್ಧ ಅಪರಾಧ ಕ್ರಮಾಂಕ 09/2026, ಕಲಂ: 281, 125(a) BNS-2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Latest Articles