ಗ್ರಾಮ ಸಭೆಯಲ್ಲಿ ‘ನಾಮಫಲಕ’ ಸಂಘರ್ಷ: ಸಮಾಧಾನಕ್ಕೆ ಪೊಲೀಸರ ಎಂಟ್ರಿ!

kadaba times

ಕನಕಮಜಲು ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ನಾಮಫಲಕ ಅಳವಡಿಕೆ ಹಾಗೂ ಅನುದಾನ ತಾರತಮ್ಯದ ಬಗ್ಗೆ ಭಾರಿ ಚರ್ಚೆ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೊಲೀಸರು ಮಧ್ಯಸ್ಥಿಕೆ ವಹಿಸಿದ ಘಟನೆ ನಡೆದಿದೆ.

kadaba times
uniq

ಸುಳ್ಯ/ ಕನಕಮಜಲು: ಇಲ್ಲಿನ ಗ್ರಾಮ ಪಂಚಾಯತ್ ಗ್ರಾಮ ಸಭೆಯು ಬುಧವಾರದಂದು (ಜ.28) ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಅಭಿವೃದ್ಧಿ ವಿಚಾರಗಳಿಗಿಂತ ಹೆಚ್ಚಾಗಿ ನಾಮಫಲಕ ಅಳವಡಿಕೆ ಹಾಗೂ ಅನುದಾನ ಹಂಚಿಕೆಯ ತಾರತಮ್ಯದ ಬಗ್ಗೆ ಸದಸ್ಯರು ಮತ್ತು ಸಾರ್ವಜನಿಕರ ನಡುವೆ ಭಾರಿ ವಾಕ್ಸಮರ ನಡೆದು, ಕೊನೆಗೆ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾದ ಪ್ರಸಂಗ ಎದುರಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಉಗ್ಗಮೂಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿ ಸಿಡಿಪಿಒ ಶೈಲಜಾ ಭಾಗವಹಿಸಿದ್ದರು. ಸಭೆ ಆರಂಭವಾಗುತ್ತಿದ್ದಂತೆ ಹಲವು ವಿಷಯಗಳು ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದವು

ನಾಮಫಲಕ ವಿವಾದ: ರಸ್ತೆ ಬದಿಗಳಲ್ಲಿ ಅಳವಡಿಸಲಾದ ನಾಮಫಲಕಗಳ ವಿಚಾರ ಸಭೆಯಲ್ಲಿ ಅತಿ ಹೆಚ್ಚು ಗದ್ದಲಕ್ಕೆ ಕಾರಣವಾಯಿತು. ಈ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದು, ಪರಿಸ್ಥಿತಿ ಕೈಮೀರುತ್ತಿದ್ದಾಗ ಸ್ಥಳದಲ್ಲಿದ್ದ ಪೊಲೀಸರು ಮಧ್ಯಸ್ಥಿಕೆ ವಹಿಸಿ ಸಮಾಧಾನಪಡಿಸಿದರು.

kadaba times
kadaba times

ಅನುದಾನ ಹಂಚಿಕೆಯಲ್ಲಿ ತಾರತಮ್ಯ: 1ನೇ ವಾರ್ಡ್‌ಗೆ ಅನುದಾನ ಹಂಚಿಕೆ ಮಾಡುವಲ್ಲಿ ಪಂಚಾಯತ್ ತಾರತಮ್ಯ ಎಸಗುತ್ತಿದೆ ಎಂಬ ಆರೋಪ ಕೇಳಿಬಂತು. ಈ ಬಗ್ಗೆ ಗ್ರಾಮಸ್ಥರು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

ಅನಧಿಕೃತ ಫ್ಲೆಕ್ಸ್ ಅಳವಡಿಕೆ: ಗ್ರಾಮದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಹಾಗೂ ನಿಯಮಬಾಹಿರವಾಗಿ ಅಳವಡಿಸಿರುವ ಫ್ಲೆಕ್ಸ್‌ಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು.

ಸಭೆಯಲ್ಲಿ ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಗ್ರಾಮದ ಪ್ರಮುಖರಾದ ಪದ್ಮನಾಭ ಭಟ್ ಕನಕಮಜಲು, ಅಜಿತ್ ಕಾರಿಂಜ, ಅವಿನಾಶ್ ಕಾರಿಂಜ, ವಿಜಯ ಕುಮಾರ್ ನರಿಯೂರು, ಈಶ್ವರ ಕೊರಂಬಡ್ಕ, ಹರಿಪ್ರಸಾದ್ ಮಾಣಿಕೋಡಿ, ಚಂದ್ರಶೇಖರ ಕನಕಮಜಲು, ನಾರಾಯಣ ಬೊಮ್ಮೆಟ್ಟಿ, ಗೋಪಾಲಕೃಷ್ಣ ಕುತ್ಯಾಳ, ನೇತ್ರಕುಮಾರ್ ಹಾಗೂ ತೀರ್ಥರಾಮ ಕಣಜಾಲು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಗ್ರಾಮದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದರು.

Related Articles

Latest Articles