
ಕಡಬ ತಾಲೂಕಿನ ಮರ್ಧಾಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ-ಐತ್ತೂರು ವಲಯದ ಸದಸ್ಯರಿಗಾಗಿ ವಿವಿಧ ಕ್ರೀಡಾಕೂಟಗಳು ನಡೆದವು. ಅರಣ್ಯಾಧಿಕಾರಿ ಯೋಗೀಶ್ ಜಿ.ಸಿ ಕಾರ್ಯಕ್ರಮ ಉದ್ಘಾಟಿಸಿದರು.


ಮರ್ಧಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ಮತ್ತು ಐತ್ತೂರು ವಲಯದ ಸದಸ್ಯರಿಗಾಗಿ ಮರ್ಧಾಳದ ಮಿತ್ತಮಜಲು ಗದ್ದೆಯಲ್ಲಿ ಭಾನುವಾರ ಕ್ರೀಡಾಕೂಟ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಂಕದಕಟ್ಟೆ ವಲಯ ಅರಣ್ಯಾಧಿಕಾರಿ ಯೋಗೀಶ್ ಜಿ.ಸಿ. ಮಾತನಾಡಿ, ಮಾನಸಿಕ ಒತ್ತಡ ಕಡಿಮೆಗೊಳಿಸಲು ಮತ್ತು ಆರೋಗ್ಯ ವೃದ್ಧಿಸಿಕೊಳ್ಳಲು ಕ್ರೀಡೆಗಳು ಅತೀ ಅಗತ್ಯ ಎಂದು ತಿಳಿಸಿದರು. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಎ. ಹಗ್ಗಜಗ್ಗಾಟ ಸ್ಪರ್ಧೆಗೆ ಚಾಲನೆ ನೀಡಿದರು.


ವಾಸುದೇವ ಭಟ್ ಕಡ್ಶ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಹೆಗ್ಡೆ, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಪಂಚಾಯತ್ ಅಧ್ಯಕ್ಷೆ ವತ್ಸಲಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸದಸ್ಯರಿಗಾಗಿ ಹಗ್ಗಜಗ್ಗಾಟ, ಲಿಂಬೆ ಚಮಚ ಓಟ, ಸಂಗೀತ ಕುರ್ಚಿ, ಗುಂಡೆಸೆತ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.
ಮೇಲ್ವೀಚಾರಕರಾದ ರವಿಪ್ರಸಾದ್ ಆಲಾಜೆ ಸ್ವಾಗತಿಸಿ, ಸೋಮೇಶ್ ವಂದಿಸಿದರು. ಸತೀಶ್ ಆಜಾನ ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ್ ರೈ ಮೈಲೇರಿ ಕ್ರೀಡಾಕೂಟದ ನಿರ್ವಹಣೆ ಮಾಡಿದರು.
