ಕುಕ್ಕೆ ಸುಬ್ರಹ್ಮಣ್ಯ: ಪರಿಸರ ನೈರ್ಮಲ್ಯ ಮರೆತ ವ್ಯಕ್ತಿಗೆ ಎರಡು ಸಾವಿರ ದಂಡ!

kadaba times

ಸುಬ್ರಹ್ಮಣ್ಯ:ಪವಿತ್ರ ಕುಮಾರಧಾರ ನದಿಗೆ  ಸೇತುವೆಯಲ್ಲಿ ನಿಂತು ಕಸ ಎಸೆದ ವ್ಯಕ್ತಿಯೊಬ್ಬರಿಗೆ ಗ್ರಾ.ಪಂ
  ಬರೋಬ್ಬರಿ
2000 ರೂ. ದಂಡ ವಿಧಿಸಿ ಖಡಕ್ ಎಚ್ಚರಿಕೆ ರವಾನಿಸಿದೆ.

kadaba times
uniq


ಸೆಪ್ಟೆಂಬರ್ 8ರಂದು ಕುಮಾರಧಾರ ಸೇತುವೆ ಮೇಲಿಂದ ಕಾರ್ಕಳದ ವೇದವ್ಯಾಸ ತಂತ್ರಿ ಎಂಬಾತ ಕಸ ಬಿಸಾಡುತ್ತಿದ್ದ ದೃಶ್ಯವನ್ನು ಸ್ಥಳೀಯ ಸಾಮಾಜಿಕ
ಕಾರ್ಯಕರ್ತರೊಬ್ಬರು ಮೊಬೈಲ್
‌ನಲ್ಲಿ ಸೆರೆಹಿಡಿದಿದ್ದರು.


ತಕ್ಷಣವೇ ಈ ಕುರಿತು ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಲಾಗಿದ್ದು, ಪಂಚಾಯತ್ ಅಧಿಕಾರಿಗಳು ವಾಹನದ ವಿವರವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹಂಚಿಕೊಂಡಿದ್ದಾರೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಜೊತೆ
ಪೊಲೀಸ್
ಇಲಾಖೆ ಕೈಜೋಡಿಸಿ ಈ ಕ್ರಮ ಕೈಗೊಂಡಿದೆ. ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ವಾಹನ ಮಾಲೀಕರನ್ನು ಪತ್ತೆಹಚ್ಚಿ
2000 ರೂ. ದಂಡ ವಿಧಿಸಿದೆ.



kadaba times
kadaba times

ಪ್ಲಾಸ್ಟಿಕ್ ಅಥವಾ ಇನ್ನಾವುದೇ ರೀತಿಯ ಕಸವನ್ನು ನದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡುವುದು ಪರಿಸರಕ್ಕೆ ಮಾರಕ. ಪವಿತ್ರ ಕುಮಾರಧಾರ ನದಿಯ ಸ್ವಚ್ಛತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ದಂಡ
ವಿಧಿಸುವ ಮೂಲಕ ಸಾರ್ವಜನಿಕರಿಗೆ
ಸ್ಪಷ್ಟ ಸಂದೇಶ ರವಾನಿಸಿದೆ.


ಸ್ಥಳೀಯರ ಸಹಕಾರದಿಂದ ಇಂತಹ ಘಟನೆಗಳು ಬೆಳಕಿಗೆ ಬರುತ್ತಿದ್ದು, ಮುಂದೆ ಯಾರೂ ಕಸ ಬಿಸಾಡಲು ಧೈರ್ಯ ಮಾಡಬಾರದು ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ. ನಿರ್ಮಲೀಕರಣಕ್ಕೆ ಸಹಕರಿಸದಿದ್ದರೆ ದಂಡ ಮತ್ತು ಕಾನೂನು ಕ್ರಮ ಅನಿವಾರ್ಯವೆನ್ನುತ್ತಾರೆ
ಅಧಿಕಾರಿಗಳು.

Related Articles

Latest Articles