ಕಡಬ :ದೊಡ್ಡಕೊಪ್ಪದಲ್ಲಿ ಇಂದು (ಡಿ.20) ಸಂಜೆ  ಕುಸಾಲ್ದ ಕುರ್ಲರಿ ನಾನ್ ಸ್ಟಾಪ್ ಕಾಮಿಡಿ

kadaba times

ಕಡಬ: ಇಲ್ಲಿನ ಯೂತ್ ಕ್ಲಬ್ ದೊಡ್ಡಕೊಪ್ಪ (ಕುಂಬಾರ ಯುವ ವೇದಿಕೆ) ಇದರ 8ನೇ ವರ್ಷದ ವಾರ್ಷಿಕ ಕಾರ್ಯಕ್ರಮವು ಕೋಡಿಂಬಾಳದ  ದೊಡ್ಡಕೊಪ್ಪ  ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಡಿ.20 ರಂದು ಸಂಜೆ ನಡೆಯಲಿದೆ

kadaba times

ಯೂತ್ ಕ್ಲಬ್ ಅಧ್ಯಕ್ಷ   ಶ್ರೀಕಾಂತ್ ಕೆ ಇವರ ಅಧ್ಯಕ್ಷತೆಯಲ್ಲಿ   ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ   ಮೋಹನ್ ದಾಸ್‌ ಬಾಳ್ಯಾಡಿ,  ವಿವೇಕಾನಂದ ವಿದ್ಯಾವರ್ದಕ ಸಂಘದ ಸಹಕಾರ್ಯನಿರ್ವಹಣಾಧಿಕಾರಿ  ವೆಂಕಟರಮಣ ರಾವ್ ಮಂಕುಡೆ ,ಪ.ಪಂ ಸದಸ್ಯೆ   ಶ್ರೀಮತಿ ಗುಣವತಿ ರಘುರಾಮ, ಇಷ್ಟದೇವತಾ ರಾಜನ್ ದೈವ ಸಪರಿವಾರ ದೈವಸ್ಥಾನ ಬದಿಗುಂಡ ಮಾಡ ದೊಡ್ಡ ಕೊಪ್ಪ ಇದರ  ಆಡಳಿತ ಮೊಕ್ತಸರರಾದ  ತಮ್ಮಯ್ಯ ಕುಂಬಾರ ಜಾಣಮನೆ,  ಸಿದ್ಧಿವಿನಾಯಕ ಭಜನಾ ಮಂಡಳಿ ಅಧ್ಯಕ್ಷ  ದೇವಣ್ಣ ಜೆ, ಇಷ್ಟದೇವತಾ ಮತ್ತು ರಾಜನ್ ದೈವ ಸಪರಿವಾರ ದೈವಗಳ ಸೇವಾ ಟ್ರಸ್ಟ್ ಅಧ್ಯಕ್ಷ  ಪದ್ಮಯ್ಯ ಕುಂಬಾರ ಕೋಚಮನೆ, ಕುಂಬಾರರ ಸೇವಾ ಸಂಘದ ಅಧ್ಯಕ್ಷ  ಕುಂಞಣ್ಣ ಕುಂಬಾರ, ಯೂತ್ ಕ್ಲಬ್ ನ ಗೌರವ ಅಧ್ಯಕ್ಷ   ಉಮೇಶ ಜೆ.ಜಾಣಮನೆ ಭಾಗವಹಿಸಲಿದ್ದಾರೆ.

uniq
kadaba times

ನಂತರ ಅನ್ನಸಂತರ್ಪಣೆ ಬಳಿಕ  ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ,   ಕಲಾಶ್ರೀ ಕುಡ್ಲ ಸಂದೀಪ್ ಶೆಟ್ಟಿ ರಾಯಿ ಮತ್ತು ತಂಡದಿಂದ ಕುಸಾಲ್ದ ಕುರ್ಲರಿ ನಾನ್ ಸ್ಟಾಪ್ ಕಾಮಿಡಿ ಕಾರ್ಯಕ್ರಮ ನಡೆಯಲಿದೆ.

Related Articles

Latest Articles