ಕಡಬ: ಬಿಲ್ಲವ ಸಂಚಾಲನ ಸಮಿತಿ ವತಿಯಿಂದ  ಶಿವಗಿರಿ ಯಾತ್ರೆ 

kadaba times

ಕಡಬ ತಾಲೂಕು ಬಿಲ್ಲವ ಸಂಚಾಲನ ಸಮಿತಿಯ ಪ್ರಧಾನ ಸಂಚಾಲಕ ಸತೀಶ್ ಕೆ ಐತೂರು ಇವರ ನೇತ್ರತ್ವದಲ್ಲಿ ಡಿ.5 ರಿಂದ ಡಿ8 ರ ವರೆಗೆ   ಶಿವಗಿರಿ ಯಾತ್ರೆಯನ್ನು ಕೈಗೊಳ್ಳಲಾಯಿತು.

kadaba times
uniq

ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ  ಸತೀಶ್ ಕುಮಾರ್ ಕೆಡೆಂಜಿ  ಅವರು ಕೊಡಿಂಬಾಳ ರೈಲ್ವೆ ನಿಲ್ದಾಣದಲ್ಲಿ  ಚಾಲನೆ ನೀಡಿ ಶುಭ ಹಾರೈಸಿದರು.

.ಈ ಯಾತ್ರೆಯಲ್ಲಿ ಕಡಬ ವ್ಯಾಪ್ತಿಯ  ಬಿಲ್ಲವ ಸಮಾಜದ ಒಟ್ಟು 61 ಮಂದಿ ಇದ್ದರು  .ಶಿವಗಿರಿ ಮಠ, ಬ್ರಹ್ಮ್ಮಶ್ರೀ ನಾರಾಯಣ ಗುರುಗಳು ಹುಟ್ಟಿದ ಸ್ಥಳ ,ಶಿವಲಿಂಗ ಪ್ರತಿಷ್ಠೆ ಮಾಡಿದ ಅರವಿಪುರ,ತಪಸ್ಸು ಮಾಡಿದ ಮರುತ್ವ ಮಲೆ, ಕನ್ಯಾಕುಮಾರಿ, ಅನಂತ ಪದ್ಮನಾಭ ಇನ್ನಿತರ ದೇವಾಲಯಗಳಿಗೆ ಭೇಟಿ ನೀಡಲಾಯಿತು.

kadaba times
kadaba times

ಈ ಯಾತ್ರೆಯಲ್ಲಿ ಪ್ರಮುಖರಾದ ರವಿ ಕಕ್ಕೇಪದವು,ಉಮೇಶ್ ಪೂಜಾರಿ ಬಲ್ಪ,ಲಿಂಗಪ್ಪ ಪೂಜಾರಿ ಮತ್ರಾಡಿ,ಲಕ್ಷ್ಮೀಶ ಬಂಗೇರ ಪೇಲತ್ತೋಡಿ ,ದಿನೇಶ್ ಆಲಂಕಾರು,ರವಿ ಆಲಂಕಾರು,ಹರೀಶ್ ಬಲ್ಯ,ಜಯಪ್ರಕಾಶ್ ದೊಳ,ಬಾಬು ಪೂಜಾರಿ ಉಂಡಿಲ,ಉದಯ ಮರ್ಧಾಳ, ಹಾಗೂ ಬಿಲ್ಲವ ಸಮಾಜದ ವಲಯ ಸಂಚಾಲಕರು ,ಗ್ರಾಮ ಸಮಿತಿಯ ಅಧ್ಯಕ್ಷರುಗಳು, ಮಹಿಳಾ ಘಟಕದ ಅಧ್ಯಕ್ಷರುಗಳಿದ್ದರು.

Related Articles

Latest Articles