ನಾಳೆ (ಡಿ. 13) ನೆಲ್ಯಾಡಿಯಲ್ಲಿ ಮಾಜಿ ಸೈನಿಕರ ಸಮ್ಮೇಳನ, ವಿಜಯ ದಿವಸ್‌

ಇಂಡೋ-ಪಾಕ್‌ ಯುದ್ದದಲ್ಲಿ ಭಾಗಿಯಾದ ಜಿಲ್ಲೆಯ 12 ಮಂದಿ ಯೋಧರಿಗೆ ಗೌರವ

kadaba times

ನೆಲ್ಯಾಡಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ದ.ಕ. ಜಿಲ್ಲಾ ಘಟಕದ ಆಶ್ರಯದಲ್ಲಿ ಮಾಜಿ ಸೈನಿಕರ ಮಹಾ ಸಮ್ಮೇಳನ, ವಿಜಯ್‌ ದಿವಸ್‌ ಕಾರ್ಯಕ್ರಮ ಡಿ. 13ರಂದು ಬೆಳಗ್ಗೆ 9.30ಕ್ಕೆ ಕಡಬ ತಾಲೂಕಿನ ನೆಲ್ಯಾಡಿ ಬಿರ್ವಾ ಸಭಾಂಗಣದಲ್ಲಿ ನಡೆಯಲಿದೆ.

kadaba times
uniq

ಉದ್ಘಾಟನ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ| ಶಿವಣ್ಣ ಎನ್‌. ಕೆ., ಮಾಜಿ ಸಂಸದೆ ಡಾ| ತೇಜಸ್ವಿನಿ ಗೌಡ, ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಪುತ್ತೂರು ಶಾಸಕ ಅಶೋಕ್‌ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್‌ ಮೊದಲಾದವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ 1971ರಲ್ಲಿ ಇಂಡೋ-ಪಾಕ್‌ ಯುದ್ದದಲ್ಲಿ ಭಾಗಿಯಾದ ಜಿಲ್ಲೆಯ 12 ಮಂದಿ ಯೋಧರನ್ನು ಗೌರವಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ನೋರ್ಬರ್ಟ್‌ ರೋಡ್ರಿಗಸ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾಜಿ ಸೈನಿಕರು ಹಾಗೂ ಅವರ ಕುಟುಂಬಸ್ಥರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ 2020ರಲ್ಲಿ ಆರಂಭಗೊಂಡ ಸಂಘವು ಸದ್ಯ ರಾಜ್ಯದ 24 ಜಿಲ್ಲೆಗಳಲ್ಲಿ ಘಟಕಗಳನ್ನು ಆರಂಭಿಸಿದ್ದು 1.41 ಲಕ್ಷ ಸದಸ್ಯರನ್ನು ಹೊಂದಿದೆ. ಮಾಜಿ ಸೈನಿಕರಿಗೆ ಪುನರ್ವಸತಿ, ಉದ್ಯೋಗ, ಆರೋಗ್ಯ ಮೊದಲಾದವುಗಳಿಗೆ ಸಂಘ ಪ್ರಯತ್ನಿಸುತ್ತಿದೆ. ಸರಕಾರದ ಸವಲತ್ತುಗಳನ್ನು ದೊರಕಿಸಿಕೊಡುತ್ತಿದೆ ಎಂದರು.

kadaba times
kadaba times

ಕಡಬ ತಾಲೂಕು ಸಂಘದ ಅಧ್ಯಕ್ಷ ಸೆಬಾಸ್ಟಿಯನ್‌ ಮಾತನಾಡಿ, ಪಾಕಿಸ್ತಾನ ವಿರುದ್ದ ವಿಜಯ ಸಾಧಿಸಿದ ಪ್ರಯುಕ್ತ ವಿಜಯ ದಿವಸ್‌ ಆಯೋಜಿಸಲಾಗಿದೆ. ವೀರಯೋಧರ ಪತ್ನಿಯವರನ್ನು ವೀರವನಿತೆಯರೆಂದು ಗುರುತಿಸಲಾಗುತ್ತಿದ್ದು ಸಮ್ಮೇಳನದಲ್ಲಿ ಆ ವೀರವನಿತೆಯರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದರು.

ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಗೋಪಾಲ ಗೌಡ, ಬೆಳ್ತಂಗಡಿ ಅಧ್ಯಕ್ಷ ಎನ್‌.ಪಿ. ತಂಗಚ್ಚನ್‌, ರಾಜ್ಯ ಸಂಯೋಜಕ ಮ್ಯಾಥ್ಯೂ ಡಿ.ಜೆ, ದ.ಕ. ಜಿಲ್ಲಾ ಖಜಾಂಚಿ ಚಂದಪ್ಪ ಡಿ.ಎಸ್‌, ಬಂಟ್ವಾಳ ತಾಲೂಕು ಸಂಘದ ಉಪಾಧ್ಯಕ್ಷ ಧನಂಜಯ ಎನ್‌. ಉಪಸ್ಥಿತರಿದ್ದರು.

Related Articles

Latest Articles