
ಕಡಬ: ಪರಿಶಿಷ್ಟ ಸಮುದಾಯದ ಮನೆಗಳಿಗೆ ಸಂಪರ್ಕಿಸುವ ರಸ್ತೆ ಸಮಸ್ಯೆಯನ್ನು ಕಡಬ ಘಟಕದ ಭೀಮ್ ಆರ್ಮಿ ಸಂಘಟನೆಯು ಸ್ಥಳೀಯರ ಜೊತೆ ಸಂಧಾನ ನಡೆಸಿ ಅಧಿಕಾರಿಗಳ ನೇತೃತ್ವದಲ್ಲಿ ರಸ್ತೆ ನಿರ್ಮಿಸಿದ್ದಾರೆ.


ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಕಂಚರಮಕ್ಕಿ ಎಂಬಲ್ಲಿ ಪರಿಶಿಷ್ಟ ಸಮುದಾಯದ ಮನೆಗೆ ಹೋಗುವ ರಸ್ತೆ ಅಗಲೀಕರಣಕ್ಕೆ ಸ್ಥಳೀಯರೊಬ್ಬರು ಅಡ್ಡಿಪಡಿಸುತ್ತಿದ್ದರು . ಹೀಗಾಗಿ ರಸ್ತೆ ಪಲಾನುಭವಿ ಕೃಷ್ಣಪ್ಪ ಮುಗೇರ ಅವರು ಗ್ರಾ.ಪಂ ಮತ್ತು ಸಂಘಟನೆಗೆ ಸಮಸ್ಯೆ ಬಗೆ ಹರಿಸುವಂತೆ ಕೋರಿಕೆ ಸಲ್ಲಿಸಿದ್ದರು.
ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ರಾಘವ ಕಳಾರ ಮತ್ತು ತಾಲೂಕು ಅಧ್ಯಕ್ಷ ತಾರಾನಾಥ ಕಡಿರಡ್ಕ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್, ಕಾರ್ಯದರ್ಶಿ ದೇವಿಕಾ, ವಾರ್ಡಿನ ಸದಸ್ಯ ಲೋಕೇಶ್ ಬಾನಜಲು,ನ್ಯಾಯ ಸಮಿತಿ ಅಧ್ಯಕ್ಷ ಮತ್ತು ಗ್ರಾ.ಪಂ ಸದಸ್ಯ ಮಹೇಶ್ ಕೌಕ್ರಾಡಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದವರ ಜೊತೆ ಚರ್ಚಿಸಿದರು.


ಯಾವುದೇ ಗೊಂದಲವಿಲ್ಲದೆ ಜೆಸಿಬಿ ಮೂಲಕ ಆ ಕುಟುಂಬದವರಿಗೆ 12 ಅಡಿ ಅಗಲವಾದ ರಸ್ತೆ ಮತ್ತು ನೀರು ಹೋಗಲು ಚರಂಡಿ ವ್ಯವಸ್ಥೆ ಮಾಡಿ , ಮೋರಿ ಅಳವಡಿಸಿ ರಸ್ತೆ ನಿರ್ಮಾಣ ಮಾಡಿ ಸಮಸ್ಯೆ ಬಗೆಹರಿಸಲಾಯಿತು.
ಈ ವೇಳೆ ದಲಿತ ಮುಖಂಡ ಕೆ. ಪಿ. ಆನಂದ ಪಡುಬೆಟ್ಟು, ಸತೀಶ್ ಇಚಿಲಂಪಾಡಿ, ವೀರಪ್ಪ ಕಂಚಿರ ಮಕ್ಕಿ , ಕೃಷ್ಣಪ್ಪ ಕಂಚಿರ ಮಕ್ಕಿ , ಹಾಗೂ ಕಾಲೋನಿ ನಿವಾಸಿಗಳು ಹಾಜರಿದ್ದರು.
