ಕಡಬ: ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು  ಅಡ್ಡಗಟ್ಟಿ ಜಲ್ಲಿಕಲ್ಲಿನಿಂದ ಹಲ್ಲೆಗೈದು ಜೀವ ಬೆದರಿಕೆಯೊಡ್ಡಿದ ಆರೋಪ: ಇಬ್ಬರ ವಿರುದ್ದ ಪ್ರಕರಣ ದಾಖಲು

kadaba times

ಕಡಬ:  ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಅವಾಚ ಶಬ್ದಗಳಿಂದ ಬೈದು ದ ಮೇರೆಗೆ  ಇಬ್ಬರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಠಾಣಾ ವ್ಯಾಪ್ತಿಯ ಬಲ್ಯ ಗ್ರಾಮದ ಬನಾರಿ ನಿವಾಸಿ   ಯೋಗೇಂದ್ರ ಕುಮಾರ್ ಎಂಬವರು ಡಿ.2 ರಂದು   ಕಡಬದ ಗೌಡ ಸಮಾಜ ಮಂದಿರದಲ್ಲಿ ನಡೆಯುವ ಮಲೆನಾಡು ಜನ ಹಿತರಕ್ಷಣಾ ವೇದಿಕೆ ಮೀಟಿಂಗ್ ನಲ್ಲಿ ಭಾಗವಹಿಸಿದ್ದರು.

ಮೀಟಿಂಗ್ ಮುಗಿದ ಬಳಿಕ  ಸಂಜೆ 5:30 ಗಂಟೆಗೆ ಬಲ್ಯದಲ್ಲಿರುವ ಅವರ ಮನೆಗೆ  ಮೋಟಾರ್ ಸೈಕಲ್ ನಲ್ಲಿ ಹೊರಟಿದ್ದ ವೇಳೆ   ಬಲ್ಯ ಗ್ರಾಮದ ನೆಲ್ಲ ಎಂಬಲ್ಲಿಗೆ  ತಲುಪಿದಾಗ  ತನ್ನ  ಚಿಕ್ಕಪ್ಪನಾದ ಪುರುಷೋತ್ತಮ ಮತ್ತು ಅವರ ಮಗ ಪ್ರಜ್ವಲ್ ಎಂಬುವವರು ಅವರ  ಬೈಕಿನಲ್ಲಿ ಬಂದು ಏಕಾಏಕಿ  ಅಡ್ಡಗಟ್ಟಿ ಅವಾಚ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಯೇ ಮಾರ್ಗದಲ್ಲಿ ಬಿದ್ದಿದ್ದ ಒಂದು ಜಲ್ಲಿ ಕಲ್ಲನ್ನು ತೆಗೆದುಕೊಂಡು ಎದೆಯ ಬಲಭಾಗಕ್ಕೆ ಬಲವಾಗಿ ಗುದ್ದಿರುವುದಾಗಿ ಆರೋಪಿಸಲಾಗಿದೆ.

kadaba times
kadaba times

ಹಲ್ಲೆಯ ರಭಸಕ್ಕೆ  ಅಲ್ಲಿಯೇ ಬಿದ್ದಿದ್ದು ಅದೇ ವೇಳೆಯಲ್ಲಿ ಅದೇ ದಾರಿಯಲ್ಲಿ ಹಾದು ಹೋಗುತ್ತಿರುವ ವ್ಯಕ್ತಿಯೊಬ್ಬರು ನೋಡಿ ಉಪಚರಿಸಿ ಕೂಡಲೇ  ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ, ಪಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು ಚಿಕಿತ್ಸೆ ನೀಡಿರುತ್ತಾರೆ.

ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ: 83/2025. ಕಲಂ: 126(2), 118(1), 352, 351(3), 3(5) 190 BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Latest Articles