
ಕೊಕ್ಕಡ/ಧರ್ಮಸ್ಥಳ: ಧರ್ಮಸ್ಥಳ- ಕೊಕ್ಕಡ ರಾಜ್ಯ ಹೆದ್ದಾರಿಯ ಪಾರ್ಪಿಕಲ್ ಸೇತುವೆ ಬಳಿ ತಿರುವಿನಲ್ಲಿ ಬೈಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಮೃತ ಪಟ್ಟ ಘಟನೆ ನ.30 ರಂದು ನಡೇದಿದೆ.


ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಹಾಗೂ ಸುಬ್ರಹ್ಮಣ್ಯದಿಂದ ಧರ್ಮಸ್ಥಳದ ಕಡೆಗೆ ಬರುತ್ತಿದ್ದ ಕೆ.ಎಸ್. ಆರ್. ಟಿ. ಸಿ ಬಸ್ ಮದ್ಯೆ ಅಪಘಾತವಾಗಿದೆ.
ಬೈಕ್ ಸವಾರ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೊಡ್ಡಗನಹಳ್ಳಿ-ದೇವರಾಯ ಸಮುದ್ರ ನಿವಾಸಿ ದೀಪಕ್ ಜಿ. ಮೃತಪಟ್ಟ ಯುವಕ.


ಬೈಕ್ ಸವಾರ ಕಾರನ್ನು ಓವರ್ ಟೇಕ್ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಕೂಡಲೇ ನೆಲ್ಯಾಡಿ ಆಸ್ಪತ್ರೆಗೆ ಗಾಯಾಳುವನ್ನು ಸಾಗಿಸಿದರೂ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ.
ಮೃತ ದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 89/2025ಕಲಂ: 281, 106(1) ಎನ್ಎಸ್ ಯಂತೆ ಪ್ರಕರಣ ದಾಖಲಾಗಿರುತ್ತದೆ.
