ಅಪ್ರಾಪ್ತ ಬಾಲಕಿ ಗರ್ಭಿಣಿ: ಯುವಕನ ವಿರುದ್ದ ಪ್ರಕರಣ ದಾಖಲು

kadaba times

ದಕ್ಷಿಣ ಕನ್ನಡ: 16ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ  ಗರ್ಭಿಣಿಯಾಗಿಸಿದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

kadaba times
uniq

ನೊಂದ ಬಾಲಕಿಯ ಅತ್ತೆಯ ಮಗ ಬಾಲಕಿಯನ್ನು ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಂಬಿಸಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾನೆ ಎನ್ನಲಾಗಿದೆ.

ಬಾಲಕಿ  ತನ್ನ ಸಂಬಂಧಿಕರ ಮನೆಗೆ ಬಂದಿದ್ದ  ವೇಳೆ ಈ ಕೃತ್ಯ ನಡೆಸಿದ್ದು ಬಳಿಕ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಬಳಿಕ ಬಾಲಕಿ ಗರ್ಭಿಣಿಯಾಗಿರುವುದಾಗಿ ಹೇಳಲಾಗಿದೆ.

kadaba times
kadaba times

. ಅನಾರೋಗ್ಯದ ಕಾರಣ ವೇಣೂರು ಸರಕಾರಿ ಆಸ್ಪತ್ರೆಗೆ ಬಂದ ವೇಳೆ ಬಾಲಕಿ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ಬಾಲಕಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಆರೋಪಿ ಅಮ್ಜತ್ ಖಾನ್ (18ವ) ವಿರುಧ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

Latest Articles