ಕಡಬ: ಹಳೇ ಸ್ಟೇಷನ್ ಬಳಿ ಬೈಕ್ ಗೆ ಗುದ್ದಿದ ಕಾರು : ರಸ್ತೆಗೆ ಎಸೆಯಲ್ಪಟ್ಟ ಇಬ್ಬರು ಆಸ್ಪತ್ರೆಗೆ ದಾಖಲು

kadaba times

ಕಡಬ: ಇಲ್ಲಿನ ಹಳೇಸ್ಟೇಷನ್ ಬಳಿ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ರಸ್ತೆಗೆ ಎಸೆಯಲ್ಪಟ್ಟು  ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನ.22 ರಂದು ನಡೆದಿದ್ದು ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ .

kadaba times
uniq

ಈ ಸುದ್ದಿಯನ್ನು ಓದಿರಿ:ಆನೆ ಕ್ಯಾಂಪ್ ಬದಲು ಗುಂಡ್ಯ-ಸುಳ್ಯ ಕೇಂದ್ರವಾಗಿರಿಸಿಕೊಂಡು ಆನೆ ಕಾರ್ಯಪಡೆ ಸ್ಥಾಪನೆ

ಮೋಟಾರ್ ಸೈಕಲ್ ಸವಾರ ಮಹಮ್ಮದ್ ಆಶಿಕ್ ಮತ್ತು  ಸಹಸವಾರ ಸಿದ್ದೀಕ್ ಗಾಯಗೊಂಡವರು.  ಸವಾರನಿಗೆ ಹಿಂಬದಿ ಸೊಂಟಕ್ಕೆ ಹಾಗೂ ಬಲ ಕೈ ಮುಂಗೈಗೆ ತರಚಿದ ಗಾಯವಾದರೆ, ಸಹಸವಾರನಿಗೆ  ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿರುತ್ತದೆ. ಕಡಬದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು   ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರಿಗೆ ಕರೆದುಕೊಂಡು ಹೋಗಿರುವುದಾಗಿ ಮಾಹಿತಿ ಲಭಿಸಿದೆ.

ಕಡಬ ಕಡೆಯಿಂದ ಮರ್ದಾಳ ಕಡೆಗೆ ಹೋಗುತ್ತಿದ್ದ ಒಂದು ಓಮಿನಿ ಕಾರು ಒಮ್ಮೆಲೆ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ಬಲಬದಿ ಆಸ್ಪತ್ರೆಯ ಕಡೆಗೆ ತಿರುಗಿಸಿದ ಪರಿಣಾಮ ಒಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದಿದೆ.

kadaba times
kadaba times

ಈ ಸುದ್ದಿಯನ್ನು ಓದಿರಿ:ಕುಕ್ಕೆ ಸುಬ್ರಹ್ಮಣ್ಯ: ಮನೆ ಸಿಟೌಟ್ ನಲ್ಲಿದ್ದ ಹುಕ್ಸಿಗೆ ವಯರ್ ಸಿಕ್ಕಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ

ಅಪಘಾತವುಂಟು ಮಾಡಿದ ಓಮಿನಿ ಕಾರ್ ನ  ಚಾಲಕನ ಹೆಸರು ಮೊಹಮ್ಮದ್ ರಿಯಾಝ್ ಎಂಬುದಾಗಿರುತ್ತದೆ. . ಈ ಬಗ್ಗೆ   ಕೊಡಿಂಬಾಳ ಗ್ರಾಮದ  ಕುಂಡೋಳಿ ನಿವಾಸಿ  ಅಬ್ದುಲ್ ನೌಸೀರ್ ಎಂಬವರು ನೀಡಿದ ದೂರಿನಂತೆ  ಕಡಬ ಪೊಲೀಸ್‌‌ ಠಾಣಾ ಅ.ಕ್ರ: 81/2025. ಕಲಂ: 281, 125 (a) BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Latest Articles