ಕುಕ್ಕೆ ಸುಬ್ರಹ್ಮಣ್ಯ: ಮನೆ ಸಿಟೌಟ್ ನಲ್ಲಿದ್ದ ಹುಕ್ಸಿಗೆ ವಯರ್ ಸಿಕ್ಕಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ

kadaba times

ಸುಬ್ರಹ್ಮಣ್ಯ: ಮನೆಯ ಸಿಟೌಟ್ ನಲ್ಲಿರುವ ಹುಕ್ಸಿಗೆ ಕರೆಂಟ್ ವಯರಿಂಗ್ ಮಾಡುವ ವಯರ್ ನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿ ಬಳಿಕ ಚಿಕಿತ್ಸೆ ಫಲಿಸದೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಲ್ಮಕಾರು ಗ್ರಾಮದಿಂದ ವರದಿಯಾಗಿದೆ.

kadaba times
uniq

ಕಲ್ಮಕಾರು ಗ್ರಾಮದ ಪೆರ್ಮುಕಜೆ  ನಿವಾಸಿ ನಾರಾಯಣ ಪಿ(85 ವರ್ಷ) ಮೃತಪಟ್ಟವರು.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರು ಮಂಗಳೂರಿನ ಖಾಸಗಿ   ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.  ಆದರೂ ಸರಿಯಾಗಿ ಗುಣವಾಗದೇ ಇರುವುದರಿಂದ ಯಾವಾಗಲೂ ಬೇಸರದಿಂದ  ಇರುತ್ತಿದ್ದು, ನನಗೆ ನೋವಾಗುತ್ತಿದೆ ನಾನು ಏನಾದರೂ ಮಾಡಿ ಸಾಯುತ್ತೇನೆಂದು ಹೇಳುತ್ತಿದ್ದರು ಎಂದು ಹೇಳಲಾಗಿದೆ.

kadaba times
kadaba times

ನ.20 ರಂದು ಬೆಳಿಗ್ಗೆ   ಮನೆಯ ಸಿಟೌಟ್ ನಲ್ಲಿರುವ ಹುಕ್ಸಿಗೆ ಕರೆಂಟ್ ವಯರಿಂಗ್ ಮಾಡುವ ವಯರ್ ನಲ್ಲಿ ಅವರ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಕೂಡಲೇ ಮಗಳು ಮತ್ತು ನೆರೆಮನೆಯವರು  ಚಿಕಿತ್ಸೆಗೆಗಾಗಿ  ಬಗ್ಗೆ ಸುಳ್ಯದ ಖಾಸಗಿ   ಆಸ್ಪತ್ರೆಗೆ ಕರೆದುಕೊಂಡು ಹೋಗಿ   ತೀವ್ರ ನಿಗಾಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನ.22 ರಂದು  ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಶ್ರೀಮತಿ ಸುಮಲತಾ ಅವರು ನೀಡಿದ ದೂರಿನಂತೆ  ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯುಡಿಆರ್ ನಂಬ್ರ: 31/2025 ಕಲಂ: 194 BNSS ಯಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Latest Articles