ಕುಕ್ಕೆ ಸುಬ್ರಹ್ಮಣ್ಯ: ಜಾಗಕ್ಕೆ ಬೇಲಿ ಹಾಕುತ್ತಿದ್ದಾಗ ಕತ್ತಿಯಿಂದ ಹಲ್ಲೆ,ಕೇಸು ದಾಖಲು

kadaba times

ಕುಕ್ಕೆ ಸುಬ್ರಹ್ಮಣ್ಯ:  ಕೊಲ್ಲಮೊಗ್ರ ಗ್ರಾಮದಲ್ಲಿ   ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರಿಗೆ ಕತ್ತಿಯಿಂದ ಹಲ್ಲೆ ನಡೆಸಿರುವ ಆರೋಪದ ಮೇರೆಗೆ  ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಾದ ಘಟನೆ ನ.19 ರಂದು ವರದಿಯಾಗಿದೆ.

kadaba times
uniq

ಠಾಣಾ ವ್ಯಾಪ್ತಿಯ  ಕೊಲ್ಲಮೊಗ್ರ ಗ್ರಾಮದ ಶಿವಾಲ ವಿಶ್ವನಾಥ ರೈ  ಮತ್ತು  ಭರತ್ ಶಿವಾಲ ಎಂಬವರಿಗೆ ಹಲವು ಸಮಯಗಳಿಂದ ಜಾಗದ ತಕರಾರು ನಡೆಯುತ್ತಿತ್ತು. ನ.17 ರಂದು ಭರತ್‌ ಶಿವಾಲ ರಸ್ತೆಯನ್ನು ಅಗಲೀಕರಣಗೊಳಿಸಿದ್ದರನ್ನಾಲಾಗಿದೆ.

kadaba times
kadaba times

ನ.19 ರಂದು ವಿಶ್ವನಾಥ ರೈ ಅವರು ತನ್ನ ಜಾಗಕ್ಕೆ ಬೇಲಿ ಹಾಕುತ್ತಿದ್ದಾಗ ಮತ್ತೆ ವಿವಾದ ಉಂಟಾಗಿದೆ. ಬೇಲಿ ತೆಗೆಯುವ ವಿಚಾರದಲ್ಲಿ ಜಗಳವಾಗಿ ವಿಶ್ವನಾಥ ರೈ ಅವರ ಎಡ ಕಿವಿ ಹಾಗೂ ಎಡ ಕೈ ಭಾಗಕ್ಕೆ ಭರತ್ ಕತ್ತಿಯಿಂದ ಕಡಿದು ಗಾಯಗೊಳಿಸಿದರೆಂದು ಆರೋಪಿಸಲಾಗಿದೆ .ಹಲ್ಲೆಗೊಳಗಾದ ವ್ಯಕ್ತಿ   ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ  ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಸುಳ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Related Articles

Latest Articles