ಕಡಬ: ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಖುರ್ಚಿ ಭದ್ರ , ಸಾರ್ವಜನಿಕರು ಕುಳಿತು ಕೊಳ್ಳುವ ಖುರ್ಚಿ ಛಿದ್ರ!

kadaba times

ಕಡಬ: ಇಲ್ಲಿನ  ಮುಖ್ಯ ಪೇಟೆಯಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ   ಮುರುಕಲು  ಕಬ್ಬಿಣದ ಕುರ್ಚಿಯಲ್ಲೇ ಸಾರ್ವಜನಿಕರು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

kadaba times
uniq

ಕಡಬ ಪಟ್ಟಣ ಪಂಚಾಯತ್ ನಿರ್ವಹಣೆಯಲ್ಲಿರುವ ಈ ತಂಗುದಾಣವನ್ನು ಈಗಾಗಲೇ ಕೆಲ ಮಾರ್ಪಾಡು ಮಾಡಲಾಗಿದೆ. ಬಸ್ ಗೆ  ಕಾಯುವ ಸಾರ್ವಜನಿಕರು ಹೆಚ್ಚಿನ ಸಂದರ್ಭದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ತುಕ್ಕು ಹಿಡಿದ ಕಾಲುಗಳಿಲ್ಲದ  ಕಬ್ಬಿಣದ ಚಯರ್ ಇಲ್ಲಿ ಇರಿಸಲಾಗಿದೆ. ಅಡಿ ಭಾಗಕ್ಕೆ ಸಿಮೆಂಟ್ ಇಟ್ಟಿಗೆ ಇರಿಸಲಾಗಿದ್ದು ಅಧಿಕಾರಿ ವರ್ಗ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಇದೊಂದು ಉದಾಹರಣೆಯಂತಿದೆ.

ಶಾಲಾ ಮಕ್ಕಳು ಸೇರಿದಂತೆ ಹಿರಿಯರು,ಮಹಿಳೆಯರು ಇದೇ ಖುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ.

kadaba times
kadaba times

“ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಖುರ್ಚಿ ಉತ್ತಮ ಸ್ಥಿತಿಯಲ್ಲಿ ಭದ್ರವಾಗಿದೆ, ಸಾರ್ವಜನಿಕರು ಕುಳಿತು ಕೊಳ್ಳುವ ಖುರ್ಚಿ ಛಿದ್ರವಾಗಿದೆ” ಎಂದು ಜನರು ಲೇವಡಿ ಮಾಡುವಂತಾಗಿದೆ.

ಹೊಸ ಆಡಳಿತ ಮಂಡಳಿಗೆ ಅಸ್ತಿತ್ವಕ್ಕೆ ಬಂದು   ಹಲವು ಸಮಯಗಳಾಗಿದ್ದು ಕೂಡಲೇ ಪ್ರಯಾಣಿಕರ ತಂಗುತಾಣಕ್ಕೆ ಮೂಲ ಸೌಕರ್ಯ ಒದಗಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

Latest Articles