ಹಲ್ಲೆ ಮಾಡಿ ಕತ್ತಿಯಿಂದ ಕಡಿದು ಕೊಲೆ ಮಾಡುವ ಬೆದರಿಕೆ: ವ್ಯಕ್ತಿಯ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ FIR ದಾಖಲು

kadaba times

ಬೆಳ್ಳಾರೆ/ಕಡಬ: ಬಾವಿಗೆ ಅಳವಡಿಸಿದ ಪೈಪನ್ನು ತೆಗೆಯುತ್ತಿರುವುದನ್ನು ಪ್ರಶ್ನಿಸಿದಕ್ಕೆ ವ್ಯಕ್ತಿಯೊಬ್ಬ  ತನ್ನ ಕೈಯಿಂದ  ಕುತ್ತಿಗೆ ಬಿಗಿಯಾಗಿ ಹಿಡಿದು  ಹಲ್ಲೆ ಮಾಡಿ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ ತಾಲೂಕು ಎಣ್ಮೂರು ಗ್ರಾಮದ ಹೇಮಳ ನಿವಾಸಿ ಶೀನಪ್ಪ ಗೌಡ (75 ವ) ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದವರು.

ಈ ಸುದ್ದಿಯನ್ನು ಓದಿರಿ: ಮೂರು ವರ್ಷದ ಹೋರಿಯನ್ನು ಕಡಿದು ಮಾಂಸ ಮಾಡುತ್ತಿದ್ದ ಶೆಡ್ ಗೆ ಸುಬ್ರಹ್ಮಣ್ಯ ಪೊಲೀಸರ ದಾಳಿ

ತನ್ನ ಮನೆಯ  ಅಂಗಳದ ಬಳಿ ಇರುವ ವೀಳ್ಯದ  ಬಳ್ಳಿಯಿಂದ ವೀಳ್ಯದೆಲೆ ಕೊಯ್ಯುತ್ತಿರುವಾಗ ಅಣ್ಣನ ಮಗ ರಾಮಣ್ಣ ಗೌಡ ಎಂಬವನು ಬಂದು ಬಾವಿಗ ಅಳವಡಿಸಿ ಪೈಪನ್ನು ತೆಗೆಯುತ್ತಿದ್ದ ವೇಳೆ  ನೀನು ಪೈಪು ಯಾಕೆ ತೆಗೆಯುತ್ತೀಯಾ ಎಂದು ಕೇಳಿದ್ದರು. ಆ ವೇಳೆ  ನೀವು ಈ ಬಾವಿಯ ನೀರನ್ನು ಕುಡಿಯಬಾರದೆಂದು ಹೇಳಿ ಶೀನಪ್ಪ ರವರ  ಕುತ್ತಿಗೆಯನ್ನು ಎರಡೂ ಕೈಯಿಂದ ಬಿಗಿಯಾಗಿ ಹಿಡಿದು ತಿರುಗಿಸಲು ಮುಂದಾಗಿದ್ದ ಎಂದು ಆರೋಪಿಸಲಾಗಿದೆ.

ಈವೆಳೆ  ಬೊಬ್ಬೆ ಹೊಡೆದಾಗ  ಮನೆಮಂದಿ ಹಾಗೂ ನೆರಮನೆಯವರು  ಬಂದಿದ್ದು ಆಗ  ಆರೋಪಿಯು  ತನ್ನನ್ನು   ನೆಲಕ್ಕೆ ದೂಡಿ ಹಾಕಿ ಪಕ್ಕದಲ್ಲಿದ್ದ ಮರದ ದೊಣ್ಣೆಯಿಂದ ಸೊಂಟಕ್ಕೆ ಮತ್ತು ಕುತ್ತಿಗೆಯ ಬಳಿ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

kadaba times
kadaba times

ಈ ಸುದ್ದಿಯನ್ನು ಓದಿರಿ:ಮನೆಯ ಹಿಂದಿನ ಕೊಟ್ಟಿಗೆಯ ಬಳಿ ಇದ್ದ ಐದು ವರ್ಷದ ಮಗುವನ್ನು ಹೊತ್ತೊಯ್ದ ಚಿರತೆ

ಹಲ್ಲೆ ನಡೆಸಿದ ಪರಿಣಾಮ ನೋವು ಉಲ್ಬಣಗೊಂಡಿರುವುದರಿಂದ  ಮನೆಯವರು ವಾಹನವೊಂದರಲ್ಲಿ   ನ.19 ರಂದು  ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 48,/2025 ಕಾನೂನಿನ ಕಲಂ ಕಲಂ 115(2),118(1),351(2),352   ಬಿ ಎನ್ ಎಸ್ 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಸುದ್ದಿ ಓದಿರಿ: ಬಂಟ್ವಾಳ ಬಳಿ ಭೀಕರ ರಸ್ತೆ ಅಪಘಾತ: ಕಡಬದ ಸ್ಕೂಟಿ ಸವಾರೆ ಸ್ಥಳದಲ್ಲೇ ಮೃತ್ಯು

Related Articles

Latest Articles