ಕಡಬ: ತನ್ನ ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ

kadaba times

ಕಡಬ: ಯುವಕನೋರ್ವ ತನ್ನ ಮನೆಯಲ್ಲೇ ರೂಮಿಗೆ ಅಳವಡಿಸಿದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನೂಜಿಬಾಳ್ತಿಲ ಗ್ರಾಮದಿಂದ ನ.19 ರಂದು ನಡೆದಿದೆ.

kadaba times
uniq

ನೂಜಿಬಾಳ್ತಿಲ ಗ್ರಾಮದ ಕೊಡಂಕೇರಿ ಆಕೋಟತ್ತಡ್ಕದ  ದಿ.ವಾಲ್ಟರ್ ರೋಡ್ರಿಗಸ್ ಎಂಬವರ ಪುತ್ರ  ಚೇತನ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಪದವಿ ಮುಗಿಸಿ ಮನೆಯಲ್ಲಿ ಕೃಷಿ ಕೆಲಸ ಮಾಡಿ ಕೊಂಡಿದ್ದ ಈತ  ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.  ಈ ಬಗ್ಗೆ ಪುತ್ತೂರು ಗಣೇಶ್ ಪೈ ವೈದ್ಯಾಧಿಕಾರಿ ಅವರ ಬಳಿ ಚಿಕಿತ್ಸೆ ಪಡೆದು ಔಷಧಿ ಮತ್ತು ಮಾತ್ರೆಗಳನ್ನು ಸೇವಿಸುತ್ತಿದ್ದನು. ನ.19 ರಂದು ಶಿಕ್ಷಕಿಯಾಗಿರುವ ತಾಯಿಯನ್ನು  ತಾಯಿಯನ್ನು ಕಾಲೇಜಿನವರೆಗೆ ಬಿಟ್ಟು  ಬಂದಿದ್ದ

ತಾಯಿ ಮಧ್ಯಾಹ್ನ   ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸದೆ ಇದ್ದಾಗ  ಮನೆಯ ಮೇಲ್ಮಡಿಯ ಕೆಲಸ ಮಾಡುತ್ತಿದ್ದ ಕೆಲಸದವರಿಗೆ  ಕರೆ ಮಾಡಿ ಮಗ  ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂಬುದಾಗಿ ತಿಳಿಸಿದ್ದರು.

kadaba times
kadaba times

ಕೆಲಸ ಮಾಡಿಕೊಂಡಿದ್ದ   ಲೋಕೇಶ್ ರವರು ಮನೆಯ ರೂಮಿಗೆ ಬಂದಾಗ ಒಳಗಿನಿಂದ ಚಿಲಕ ಹಾಕಿಕೊಂಡು ಭದ್ರಗೊಳಿಸಿರುವುದಾಗಿ ಬಳಿಕ ಕಿಟಕಿ ಸಂದಿಯಿಂದ ರೂಮಿನ ಒಳಗಡೆ ನೋಡಿದಾಗ ಚೇತನ್ ರೂಮಿಗೆ ಅಳವಡಿಸಿದ ಫ್ಯಾನಿಗೆ ನೇಣು ಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿರುವುದಾಗಿ ಕಂಡು ಬಂದಿದೆ.

ಮಾನಸಿಕ ಖಿನ್ನತೆಗೆ ಒಳಗಾದವನು ಔಷಧಿ ಸೇವಿಸುತ್ತಿದ್ದು ಇದೇ ಬೇಸರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂದು ತಾಯಿ ಎಂ ಬಿ ಲಿಸಿ ಅವರು ನೀಡಿದ ದೂರಿನಂತೆ ಠಾಣಾ ಯುಡಿಆರ್‌ ನಂ: 34/2025 ಕಲಂ:194 (3) BNSS-2023. ಪ್ರಕರಣ ದಾಖಲಾಗಿದೆ.

Related Articles

Latest Articles