ಶಿರಾಡಿಘಾಟ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕೆಂಪುಹೊಳೆಗೆ ಬಿದ್ದ ಕಾರು

kadaba times

ನೆಲ್ಯಾಡಿ/ಶಿರಾಡಿ:  ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸುಮಾರು 80 ಅಡಿ ಆಳಕ್ಕೆ ಬಿದ್ದ ಘಟನೆ ಶಿರಾಡಿ ಘಾಟ್‌ನ ಸಕಲೇಶಪುರ ಸಮೀಪದ ಮಾರನಹಳ್ಳಿಯಲ್ಲಿ ಅ.24ರಂದು ಬೆಳಿಗ್ಗೆ ನಡೆದಿದೆ.

kadaba times
uniq

ಕಾರಿನಲಿದ್ದ ಶಿವಮೊಗ್ಗ ಮೂಲದ ಶಿಕ್ಷಕ ಕುಟುಂಬ ಅಪಾಯದಿಂದ ಪಾರಾಗಿದ್ದಾರೆ.

ಶಿಕ್ಷಕ   ಗೋವಿಂದ ನಾಯ್ಕ್ ಅವರು ತಮ್ಮ ಪುತ್ರನನ್ನು ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿರುವ  ನವೋದಯ ಶಾಲೆಗೆ ಬಿಡುವ ಸಲುವಾಗಿ  ಪತ್ನಿ ಹಾಗೂ ಇನ್ನೋರ್ವ ಪುತ್ರನ ಜೊತೆಗೆ ಕಾರಿನಲ್ಲಿ ಶಿರಾಡಿ ಘಾಟ್ ಮೂಲಕ ಬರುತ್ತಿದ್ದರು.

kadaba times
kadaba times

ಈ ಸಮಯ  ಮಾರನಹಳ್ಳಿ  ನ್ಯೂ ಸ್ಟಾರ್ ಹೋಟೆಲ್ ಬಳಿ ತಲುಪುತ್ತಿದ್ದಂತೆ ತಡೆಗೋಡೆಯಿಲ್ಲದ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ಹೋಟೆಲ್ ಪಕ್ಕದ ನೀರಿನ ಸಿಂಟೆಕ್ಸ್ ಟ್ಯಾಂಕ್‌ಗೆ ಡಿಕ್ಕಿಯಾಗಿ ಸುಮಾರು 80 ಅಡಿ ಆಳದ ಕೆಂಪುಹೊಳೆಗೆ ಬಿದ್ದಿದೆ.

ಅಪಘಾತದ ಶಬ್ದ ಕೇಳಿ ಸ್ಥಳೀಯರು ಹಾಗೂ ಇತರ ವಾಹನ ಸವಾರರು ಬಂದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಕಾರು ಸಂಪೂರ್ಣ ಹಾನಿಗೊಂಡಿದ್ದು ಶಿಕ್ಷರ ಪತ್ನಿ  ಸಣ್ಣ ಪುಟ್ಟ ಗಾಯವಾಗಿದೆ . ಉಳಿದವರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

Related Articles

Latest Articles